ಕಸಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣ ಸಂವಾದ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಗಣ್ಯರು, ಅಧಿಕಾರಿಗಳು ಭಾಗಿ
ಮದ್ಯಪಾನ, ಧೂಮಪಾನ ಆರೋಗ್ಯ ಹಾನಿಕರ ಎಂದು ಬರೆಯಲಾಗುತ್ತದೆ, ಇದನ್ನು ಜನ ಸ್ವೀಕರಿಸಿದ್ದರೆ ಇವೆಲ್ಲವೂ ಮುಚ್ಚಲ್ಪಡುತ್ತಿದ್ದವು. ಪ್ಲಾಸ್ಟಿಕ್ ಬಗ್ಗೆಯೇ ಮಾತನಾಡಬೇಕಾದರೆ ನಾವು ಪ್ಲಾಸ್ಟಿಕ್ ಬಳಕೆ ಸಂಪೂರ್ಣ ಬಿಡಬೇಕಾಗುತ್ತದೆ. ಪ್ರತಿಯೊಬ್ಬರೂ ಅನಿವಾರ್ಯವಾಗಿ ಪ್ಲಾಸ್ಟಿಕ್ ಬಳಸುತ್ತಿದ್ದು ಹೇಗೆ ನಿರ್ವಹಣೆ ಮಾಡುತ್ತೇವೆ ಎನ್ನುವುದು ಮುಖ್ಯ.
ಘಟಕ ಸ್ಥಾಪನೆಗೆ ವಿರೋಧ
ಸ್ವಚ್ಛತಾ ಘಟಕ ಸ್ಥಾಪನೆಗೆ ಮುಂದಾದಾಗ ಜನ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಸನಿಹದಲ್ಲಿರುವ ಐದು ಗ್ರಾಪಂಗಳಿಗೆ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಎಂ.ಕೆ.ಅಶ್ರಫ್ ಮನವಿ ಮಾಡಿದರು. ಪ್ಲಾಸ್ಟಿಕ್ ಶಿಕ್ಷಣ ಪಠ್ಯದಲ್ಲಿ ಬಂದರೆ ಶಾಲಾ ಮಟ್ಟದಲ್ಲಿ ಜಾಗೃತಿ ಸಾಧ್ಯ. ವಾರ್ಡ್ ಮಟ್ಟದಲ್ಲಿ ಕಸ ಹೆಕ್ಕಲು ಬಂದವ ಮುಂದಕ್ಕೆ ಜೀವಮಾನದಲ್ಲಿ ಕಸ ಎಸೆಯುವುದಿಲ್ಲ ಎಂದು ಮುತ್ತಪ್ಪ ಹೇಳಿದರು. ಪ್ರತಿಯೊಬ್ಬರೂ ಒಂದಲ್ಲ ಒಂದು ಧಾರ್ಮಿಕ ಕೇಂದ್ರಕ್ಕೆ ಹೋಗುವುದರಿಂದ ಜನರ ಮನಸ್ಥಿತಿ ಬದಲಾಯಿಸಲು ಧಾರ್ಮಿಕ ಕೇಂದ್ರಗಳಿಂದಲೇ ಸಾಧ್ಯ ಎಂದು ಗುರುದತ್ ತಿಳಿಸಿದರು.