ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸುವರ್ಣ ರಜತನಿಧಿ ಸಮರ್ಪಣಾ ಕಾರ್ಯಕ್ಕೆ ಚಾಲನೆ ನೀಡಿದರು.  
ದಕ್ಷಿಣ ಕನ್ನಡ

ದೇಗುಲ ನಿರ್ಮಾಣಕ್ಕೆ ಭಕ್ತರ ಸಹಕಾರ ಅಗತ್ಯ : ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಕಾಸರಗೋಡು: ಭಕ್ತರು ನೀಡುವ ಕಾಣಿಕೆ ದೈವ, ದೇವಸ್ಥಾನಗಳ ಸಾನ್ನಿಧ್ಯ ವೃದ್ಧಿ ಜತೆಗೆ ಆರಾಧನಾಲಯಗಳ ಅಭಿವೃದ್ಧಿಗೆ ಸಹಕಾರಿ. ದೇವರು ನಮಗೆ ಒದಗಿಸಿದ ಸಂಪತ್ತಿನ ಒಂದಂಶ ದೇವರಿಗೆ ಸಮರ್ಪಿಸುವ ಮೂಲಕ ನಾವು ಕೃತಾರ್ಥರಾಗಬೇಕು. ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯ ದೇಗುಲ ನಿರ್ಮಾಣ ಕಾರ್ಯ ಶೀಘ್ರ ನೆರವೇರುವಂತಾಗಲು ಭಕ್ತರ ಸಹಕಾರ ಅಗತ್ಯ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಸ್ವರ್ಗ ಮಲೆತ್ತಡ್ಕ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸುವರ್ಣ ರಜತನಿಧಿ ಸಮರ್ಪಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಉದ್ಯಮಿ ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಯಾಗಿದ್ದರು. ಕ್ಷೇತ್ರ ತಂತ್ರಿವರ್ಯ ನಾರಾಯಣ ಭಟ್ ಕೊರೆಕ್ಕಾನ, ಕ್ಷೇತ್ರದ ಆನುವಂಶಿಕ ಪ್ರಧಾನ ಮಾಧವ ಭಟ್ ಬೆಲ್ಲ, ಆರೆಸ್ಸೆಸ್ ಕುಟುಂಬ ಪ್ರಭೋಧನ್‌ನ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಆಟಿಕುಕ್ಕೆ ವೆಂಕಟೇಶ ಭಟ್, ಎಣ್ಮಕಜೆ ಗ್ರಾಪಂ ಮಾಜಿ ಅಧ್ಯಕ್ಷ ಸೋಮಶೇಖರ ಜೆ.ಎಸ್., ಕ್ಯಾಂಪ್ಕೋ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಕೋಳಾರು, ಪತ್ತಡ್ಕ ಗಣಪತಿ ಭಟ್, ವೇಣು ಕಳೆಯತ್ತೋಡಿ, ಡಾ.ಶ್ರೀಪತಿ ಕಜಂಪಾಡಿ, ಸದಾನಂದ ಶೆಟ್ಟಿಕುದ್ವ, ರಾಜಾರಾಂ ಎಸ್.ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಕೆ.ವೈ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.