ಸಿನಾನ್, ಇರ್ಶಾದ್‌ 
ದಕ್ಷಿಣ ಕನ್ನಡ

ತಲವಾರು ದಾಳಿ ಪ್ರಕರಣದ ಆರೋಪಿ ಸೆರೆ : ಉಳಿದಿಬ್ಬರಿಗಾಗಿ ಶೋಧ

ಸೌಮ್ಯ ಆರ್

ಪ್ರಮುಖ ಮುಖ್ಯಾಂಶಗಳು

  • ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಂಗಳವಾರ ಬಿಡುಗಡೆ
  • ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಶೋಧ
  • ತಲವಾರು ದಾಳಿ ಪ್ರಕರಣದ ಆರೋಪಿ ಸೆರೆ
ಎಡಪದವಿನ ಹನುಮಾನ್ ಮಂದಿರ ಬಳಿ ರಾ.ಹೆದ್ದಾರಿಯಲ್ಲಿ ನಾಲ್ವರ ತಂಡದಿಂದ ಗಾಯಗೊಂಡಿದ್ದ ಅಖಿಲೇಶ್(21) ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಂಗಳವಾರ ಬಿಡುಗಡೆ ಹೊಂದಿದ್ದಾರೆ. ಸ್ಥಳೀಯ ಯುವಕರ ತಂಡ ಸೋಮವಾರ ಸಂಜೆಯೇ ಘಟನಾ ಸ್ಥಳದಿಂದ ಆರೋಪಿ ಮೊಹಮ್ಮದ್ ಸಿನಾನ್ ಎಂಬಾತನನ್ನು ವಶಕ್ಕೆ ಪಡೆದು ಬಜ್ಪೆ ಪೊಲೀಸರಿಗೊಪ್ಪಿಸಿತ್ತು. ಮಂಗಳವಾರ ಇನ್ನೋರ್ವ ಆರೋಪಿ ವೇಣೂರಿನ ಕೆರೆಕೋಡಿ ನಿವಾಸಿ ಇರ್ಶಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ನಡೆಸಿದ ತಂಡದಲ್ಲಿ ನಾಲ್ವರು ಇದ್ದು, ಉಳಿದಿಬ್ಬರ ಗುರುತು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.