ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಾಲರಿ ಗೊಬ್ಬರ ತಯಾರಿಕಾ ಘಟಕ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್, ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್ ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ತ್ಯಾಜ್ಯ ನಿರ್ವಹಣೆಗೆ ಸೂಕ್ತ ಘಟಕ

ಸ್ವಚ್ಛ ಮೂಡುಬಿದಿರೆ ಪರಿಕಲ್ಪನೆಯೊಂದಿಗೆ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ಸೂಕ್ತ ನಿರ್ವಹಣೆಗಾಗಿ ಘಟಕ ನೀಡಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್ ಹೇಳಿದರು.

ಮೂಡುಬಿದಿರೆ: ಸ್ವಚ್ಛ ಮೂಡುಬಿದಿರೆ ಪರಿಕಲ್ಪನೆಯೊಂದಿಗೆ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ಸೂಕ್ತ ನಿರ್ವಹಣೆಗಾಗಿ ಘಟಕ ನೀಡಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್ ಹೇಳಿದರು.

ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಜಾಲರಿ ಗೊಬ್ಬರ ತಯಾರಿಕಾ ಘಟಕವನ್ನು ಮಂಗಳವಾರ ಹಸ್ತಾಂತರಿಸಲಾಯಿತು.

ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಆಹಾರ ತ್ಯಾಜ್ಯ, ಮರಗಳಿಂದ ಬೀಳುವ ಒಣ ಎಲೆ, ಗಿಡದ ಕಡ್ಡಿಗಳನ್ನು ಬಳಸಿ ಗೊಬ್ಬರ ತಯಾರಿಸುವ ಮೂಲಕ ತ್ಯಾಜ್ಯ ನಿರ್ವಹಣೆ ಕೈಗೊಳ್ಳಲಾಗುತ್ತದೆ. ನಮ್ಮ ಆಸ್ಪತ್ರೆ ಸ್ವಚ್ಛ ಆಸ್ಪತ್ರೆ ಎಂಬ ಉದ್ದೇಶದ ಈ ಕಾರ್ಯಕ್ಕೆ ರೋಟರಿ ಕ್ಲಬ್, ಪುರಸಭೆ ಪರಿಸರ ಅಭಿಯಂತ ಶಿಲ್ಪಾ ಸಹಕಾರ ನೀಡಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್ ಮಾತನಾಡಿದರು. ತಾಂತ್ರಿಕ ಸಹಕಾರ ನೀಡಿದ ಪುರಸಭೆ ಪರಿಸರ ಅಭಿಯಂತ ಶಿಲ್ಪಾ, ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾರಾಯಣ ಪಿ.ಎಂ., ರೋಟರಿ ಕ್ಲಬ್‌ನ ಜಯರಾಮ ಕೋಟ್ಯಾನ್, ರತ್ನಾಕರ ಜೈನ್, ಸಂದೀಪ್ ನಾಯಕ್, ಎಸ್.ಎನ್.ಬೋರ್ಕರ್, ಪುರಸಭೆ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದರ್ ನದ್ಾ, ಪುರಸಭೆ ಕಮ್ಯೂನಿಟಿ ಮೊಬಿಲೈಸರ್‌ಗಳಾದ ಆಶಾ, ಅಮಿತಾ, ಚಂದ್ರಿಕಾ, ಅನುಷಾ, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಉಪಸ್ಥಿತರಿದ್ದರು.