ಸುಬ್ರಹ್ಮಣ್ಯ: ಕನ್ನಡ ರಾಜ್ಯೋತ್ಸವ ನವೆಂಬರ್ ಒಂದಕ್ಕೆ ಸೀಮಿತವಾಗಿರದೆ ದಿನನಿತ್ಯದ ಆಚರಣೆಯಾಗಬೇಕು. ಕನ್ನಡ ಭಾಷೆಯನ್ನು ಹೃದಯಾಂತರಾಳದಲ್ಲಿಟ್ಟು ಪೂಜಿಸಬೇಕು. ಕನ್ನಡ ಪುಸ್ತಕ ಓದುವ ಮೂಲಕ ಮಾತೃಭಾಷೆಯ ಶ್ರೀಮಂತಿಕೆಯನ್ನು ಅರಿಯುವುದು ಅಗತ್ಯ. ಮಾತೃಭಾಷೆಯ ಪ್ರಗತಿಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಪ್ರೊ.ಕೆ.ಆರ್.ಶೆಟ್ಟಿಗಾರ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಸುಬ್ರಹ್ಮಣ್ಯದ ಮಹರ್ಷಿ ವಾಲ್ಮೀಕಿ ಬುಡಕಟ್ಟು ಜನಾಂಗದ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಕೂಜುಗೋಡು ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.
ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಪೊಲೀಸ್ ಅಧಿಕಾರಿ ಸಂಧ್ಯಾಮಣಿ, ವಾಲ್ಮೀಕಿ ವಸತಿ ಶಾಲೆಯ ಮುಖ್ಯಸ್ಥ ಬಸವರಾಜ್, ಶಾಲಾ ಮುಖ್ಯಶಿಕ್ಷಕಿ ಮಲ್ಲಿಕಾ ಮುಖ್ಯಅತಿಥಿಗಳಾಗಿದ್ದರು. ಲಯನ್ಸ್ ನಿಕಟಪೂರ್ವಾಧ್ಯಕ್ಷೆ ವಿಮಲಾ ರಂಗಯ್ಯ, ಕೋಶಾಧಿಕಾರಿ ಪವನ್ ಎಂ.ಡಿ, ಕಾರ್ಯದರ್ಶಿ ವಿಷ್ಣು ಪಾತಿಕಲ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಕೃಷ್ಣಕುಮಾರ್ ಬಾಳುಗೋಡು, ಗಾಯತ್ರಿ ಕೃಷ್ಣ ಕುಮಾರ್, ಲೋಕೇಶ ಬಿ.ಎನ್, ಚಂದ್ರಶೇಖರ ಚೆನ್ನಕಜೆ ಉಪಸ್ಥಿತರಿದ್ದರು.