ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್
ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು 2025- 26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ನಿರೀಕ್ಷೆಗೂ ಮೀರಿ ರೂ.2.16 ಕೋಟಿ ನಿವ್ವಳ ಲಾಭದೊಂದಿಗೆ ಸೊಸೈಟಿಯ ಎಲ್ಲಾ ವಿಭಾಗಗಳಲ್ಲೂ ಅದ್ವಿತೀಯ ಹಾಗೂ ಅಪರೂಪದ ಸಾಧನೆ ಮಾಡಿದೆ.
ಏ.1 ರಂದು ಪ್ರಧಾನ ಕಚೇರಿಯಲ್ಲಿ ಸಹಕಾರಿಯ ಅವಲೋಕನಾ ಸಭೆಯಲ್ಲಿ ಮಾತನಾಡಿದ ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್, ಶ್ರೀಶಾ ಸೊಸೈಟಿಯು ಆರಂಭವಾಗಿ ಕೇವಲ ಆರು ವರ್ಷಗಳಷ್ಟೇ ಸಂದಿದ್ದರೂ ಸಾಧನೆಯಲ್ಲಿ ಬಹು ದೂರ ಕ್ರಮಿಸಿದೆ. ಈ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ ಶೇ.30 ರಷ್ಟು ಏರಿಕೆಯೊಂದಿಗೆ ರೂ.54.30 ಕೋಟಿ ಹಾಗೆಯೇ ಸಾಲ ವಿತರಣೆಯಲ್ಲಿ ಶೇ.25 ರಷ್ಟು ಏರಿಕೆಯೊಂದಿಗೆ ರೂ.44.88 ಕೋಟಿ ತಲುಪಿರುವುದು ವಿಶೇಷ. ಸೊಸೈಟಿಯು ಶೇ.98 ವಸೂಲಾತಿಯೊಂದಿಗೆ ಹಾಗೂ ಶೇ.27 ಏರಿಕೆಯ ನಿವ್ವಳ ಲಾಭ ರೂ.2.16 ಕೋಟಿ ಗಳಿಸಿರುವುದು ಇದರ ಶಿಸ್ತುಬದ್ಧ ಆಡಳಿತ ಹಾಗೂ ಸಿಬ್ಬಂದಿ ವರ್ಗದ ಶ್ವಮವೇ ಕಾರಣ ಎಂದರು.
ಶ್ರೀಶಾ ಸೊಸೈಟಿಯು ಐದು ಸುಸಜ್ಜಿತ ಶಾಖೆಗಳನ್ನು ಹೊಂದಿದ್ದು ಎಲ್ಲವೂ ಸಂಪೂರ್ಣ ಗಣೀಕೃತವಾಗಿವೆ. ಗ್ರಾಹಕರ ಅವಶ್ಯಕತೆ ತಕ್ಕಂತೆ ತ್ವರಿತಗತಿಯ ಸಾಲ ವಿತರಣೆ ಶ್ರೀಶಾದ ವಿಶೇಷತೆ. ಈ ವರ್ಷ ಸೊಸೈಟಿಯು ಪ್ರತಿ ಷೇರಿಗೆ ರೂ.2740 ಲಾಭ ಗಳಿಸಿರುವುದು ಇದರ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಠೇವಣಿ ಹಾಗೂ ನಿವ್ವಳ ಲಾಭದ ಅನುಪಾತ 1:4 ಆಗಿದೆ. ಅಂದರೆ ಪ್ರತಿ ಒಂದು ಕೋಟಿ ಠೇವಣಿಗೆ 4 ಲಕ್ಷ ನಿವ್ವಳ ಲಾಭ ಗಳಿಸಿರುವುದು ದೊಡ್ಡ ಸಾಧನೆಯೇ ಸರಿ. ಕೇವಲ 6 ವರ್ಷಗಳಲ್ಲೇ ರೂ.5.60 ಕೋಟಿ ಲಾಭಾಂಶದ ನಿಧಿಗಳನ್ನು ಹೊಂದಿರುವುದು ಒಂದು ದಾಖಲೆ. ಸಹಕಾರಿಯು ಷೇರುದಾರರಿಗೆ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷವೂ ಗರಿಷ್ಠ ನೀಡಬಹುದಾದ ಶೇ.25 ಡಿವಿಡೆಂಡ್ ನೀಡುತ್ತಿದೆ ಎಂದು ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ತಿಳಿಸಿದರು.
ಎಂಎನ್‌ಜಿ-3ಏ. ಎಂ.ಎಸ್.ಗುರುರಾಜ್