ಭದ್ರಾ ಹೋಮ್ ಅಪ್ಲೈಯನ್ಸಸ್. 
ದಕ್ಷಿಣ ಕನ್ನಡ

ಭದ್ರಾ ಹೋಮ್ ಅಪ್ಲೈಯನ್ಸಸ್‌ನಲ್ಲಿ ವಿಶೇಷ ಕೊಡುಗೆ

ವಿವಿಧ ಬಹುಮಾನ ಗೆಲ್ಲುವ ಅವಕಾಶ

ಬಂಟ್ವಾಳ: ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಬಂಟ್ವಾಳ ಬಸ್ತಿಪಡ್ಪುವಿನ ಅಗ್ನಿಶಾಮಕ ದಳ ಕಚೇರಿ ಎದುರು ಇರುವ ‘ಭದ್ರಾ ಹೋಮ್ ಅಪ್ಲೈಯನ್ಸಸ್’ ಸಂಸ್ಥೆ ಗ್ರಾಹಕರಿಗಾಗಿ ಆಕರ್ಷಕ ಫೆಸ್ಟಿವ್ ಧಮಾಕಾ ಸೇಲ್ ಘೋಷಿಸಿದೆ.

ಮನೆಗೆ ಬೇಕಾದ ವಸ್ತುಗಳನ್ನು ಪ್ರಧಾನವಾಗಿಟ್ಟುಕೊಂಡು ಆರಂಭಗೊಂಡ ಮಾರಾಟ ಮಳಿಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಮಾರಾಟವನ್ನು ಆಯೋಜಿಸಿದೆ. ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ವಸ್ತುಗಳ ಖರೀದಿಯ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ಈ ವಿಶೇಷ ಸೇಲ್‌ನ ಸದುಪಯೋಗಪಡಿಸಿಕೊಳ್ಳಬಹುದು ಎಂದು ಮಾಲೀಕರಾದ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ತಿಳಿಸಿದ್ದಾರೆ.

ಗುಣಮಟ್ಟವನ್ನು ಹೊಂದಿರುವ ಗೃಹೋಪಯೋಗಿ ವಸ್ತುಗಳು ಇಲ್ಲಿ ದೊರೆಯುತ್ತಿದ್ದು, ಅತಿಕಡಿಮೆ ದರದಲ್ಲಿ ಮಾರಾಟಕ್ಕಿದೆ.

ವೈಶಿಷ್ಟೃಗಳೇನು?

ಬಂಪರ್ ಬಹುಮಾನ: ಅದೃಷ್ಟಶಾಲಿ ಗ್ರಾಹಕರಿಗೆ ಬಂಪರ್ ಬಹುಮಾನವಾಗಿ 40 ಗ್ರಾಂ ಚಿನ್ನ ಗೆಲ್ಲುವ ಅವಕಾಶವಿದೆ.

ಖಚಿತ ಉಡುಗೊರೆ ಮತ್ತು ಕೂಪನ್: ಪ್ರತಿ ಖರೀದಿಗೂ ಖಚಿತ ಉಡುಗೊರೆ ಲಭ್ಯವಿದ್ದು, ಪ್ರತಿ 2,000 ರೂ. ಖರೀದಿಗೆ ಕೂಪನ್ ನೀಡಲಾಗಿದೆ.

ಸುಲಭ ಕಂತುಗಳು ಮತ್ತು ಕ್ಯಾಶ್‌ಬ್ಯಾಕ್: ಬಜಾಜ್ ಫಿನ್ಸರ್ವ್, ಎಚ್ಡಿಬಿ ಫೈನಾನ್ಶಿಯಲ್ ಸರ್ವೀಸಸ್ ಮೂಲಕ ಸುಲಭ ಮಾಸಿಕ ಕಂತುಗಳಲ್ಲಿ ಮನೆಗೆ ಅಗತ್ಯವಿರುವ ವಸ್ತುಗಳನ್ನು ಕೊಂಡೊಯ್ಯಬಹುದು. ಇದರೊಂದಿಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳೂ ಲಭ್ಯವಿವೆ.

ವಿಜಯವಾಣಿ ವಿಜಯೋತ್ಸವ

ರಾಜ್ಯದಲ್ಲಿ ವಿಜಯವಾಣಿ ವಿಜಯೋತ್ಸವ ಬಹುಮಾನವಾಗಿ 5 ಹ್ಯಾಚ್‌ಬ್ಯಾಕ್ ಕಾರ್, 10 ದ್ವಿಚಕ್ರ ವಾಹನ, 10 ರೆಫ್ರಿಜರೇಟರ್, 10 ವಾಷಿಂಗ್ ಮಷಿನ್, 0.50 ಗ್ರಾಂ ಚಿನ್ನದ ನಾಣ್ಯಗಳು(125), 10 ಸೇಫ್ ಲಾಕರ್, 20 ವೆಟ್ ಗ್ರೈಂಡರ್, 10 ಗ್ರಾಂ ಬೆಳ್ಳಿ ನಾಣ್ಯಗಳು (258), 150 ಮಿಕ್ಸರ್, 20 ಟ್ರಾಲಿ ಬ್ಯಾಗ್, 350 ಇಲೆಕ್ಟ್ರಿಕ್ ಕೆಟಲ್, 90 ಇಂಡಕ್ಷನ್ ಸ್ಟೌ, 300 ಹಾಟ್‌ಫ್ಲಾಸ್ಕ್, 400 ಪ್ರೆಶರ್ ಕುಕ್ಕರ್, 260 ಪೆಡಸ್ಟಲ್ ಫ್ಯಾನ್, 470 ಕಾಪರ್ ಬಾಟಲ್ ಲಭಿಸಲಿದೆ. ರಾಜ್ಯವನ್ನು 5 ವಲಯವಾಗಿ ವಿಂಗಡಿಸಿದ್ದು, ಇದರಲ್ಲಿ ಮಂಗಳೂರು ಒಂದಾಗಿದೆ. ಪ್ರತಿವಲಯಕ್ಕೂ ಬಂಪರ್ ಬಹುಮಾನವಾಗಿ ಒಂದು ಹ್ಯಾಚ್ ಬ್ಯಾಕ್ ಕಾರು ಇರಲಿದೆ.