ಕೊಲತ್ತಡ್ಕದಿಂದ ಡಿಂಬ್ರಿಗೆ ಸಂಪರ್ಕಿಸುವ ರಸ್ತೆಯ ಶಾಂತಿದಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ಸುರಿದಿರುವ ತ್ಯಾಜ್ಯ ರಾಶಿ. 
ದಕ್ಷಿಣ ಕನ್ನಡ

ಸ್ವಚ್ಛ ಗ್ರಾಮದಲ್ಲಿ ತ್ಯಾಜ್ಯ ವಾಸನೆ : ಒಳಮೊಗ್ರು ವ್ಯಾಪ್ತಿಯ ಶಾಂತಿದಡಿಯಲ್ಲಿ ಕಸದ ರಾಶಿ

ಪ್ರಮುಖ ಮುಖ್ಯಾಂಶಗಳು

  • ದಂಡ ವಿಧಿಸಿದರೂ ನಿಲ್ಲದ ಕಸಕಡ್ಡಿ ಸುರಿಯುವಿಕೆ
  • ಸಾಂಕ್ರಾಮಿಕ ರೋಗ ಹರಡುವ ಭೀತಿ
  • ಮಾದರಿ ಗ್ರಾಮ ಸಂಕಲ್ಪಕ್ಕೆ ಹಿನ್ನಡೆ
  • ಕಠಿಣ ಕಾನೂನು ಕ್ರಮಕ್ಕೆ ಹೆಚ್ಚಿದ ಒತ್ತಡ

ಮುಖ್ಯರಸ್ತೆಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಂದ ಸ್ವಚ್ಛತೆ ಬಗ್ಗೆ ಸತತ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆದಿರುವುದರಿಂದ ಹಾಗೂ ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರಿಂದ ಮುಖ್ಯ ರಸ್ತೆಗಳ ಬದಿಯಲ್ಲಿ ಕಸ, ತ್ಯಾಜ್ಯ ಸುರಿಯುವಿಕೆ ಕಡಿಮೆಯಾಗಿದೆ. ಇತರ ಕಡೆಗಳಲ್ಲೂ ಇದೇ ಕಾರ್ಯವೈಖರಿ ಮೂಲಕ ತ್ಯಾಜ್ಯ ಸುರಿಯುವಿಕೆ ನಿಯಂತ್ರಣಗೊಳ್ಳಬೇಕಿದೆ.

ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಸ್ವಚ್ಛ ಗ್ರಾಮವನ್ನಾಗಿ ಮಾಡುವಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕಸ, ತ್ಯಾಜ್ಯಗಳನ್ನು ರಸ್ತೆ ಬದಿಗೆ ತಂದು ಸುರಿಯುವುದು ಕಾನೂನಿನ ಪ್ರಕಾರ ಅಪರಾಧ. ತಪಿತಸ್ಥರ ಪತ್ತೆಹಚ್ಚಿ ಅಂತಹವರ ವಿರುದ್ಧ ಕಾನೂನಿನ ಪ್ರಕಾರ ದಂಡನೆ ವಿಧಿಸಲಾಗುವುದು.