ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ ಸನ್ನಿಧಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವ ಶಿವಲಿಂಗಕ್ಕೆ ಮಂಗಳವಾರ ರಾತ್ರಿ ವಿಶೇಷ ಅಭಿಷೇಕ ಹಾಗೂ ಶಿವ ಪೂಜಾ ಕಾರ್ಯಗಳು ನಡೆದವು.
ಅರ್ಚಕ ಹರೀಶ್ ಉಪಾಧ್ಯಾಯ ಪೌರೋಹಿತ್ಯದಲ್ಲಿ ಉದ್ಭವಲಿಂಗಕ್ಕೆ ವಿಶೇಷ ಶಿವ ಪೂಜೆ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭೀಷೇಕ, ಬಿಲ್ವಪತ್ರೆ ಅರ್ಚನೆ ಹಾಗೂ ಶ್ರೀ ರಾಮಚಂದ್ರಾಪುರ ಮಠದ ಶ್ರದ್ಧಾಳುಗಳಿಂದ ರುದ್ರ ಪಾರಾಯಣ, ಇಳಂತಿಲದ ಭಜಕರಿಂದ ಭಜನಾ ಸೇವೆ ನೆರವೇರಿತು.
ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಸೋಮನಾಥ, ಡಾ.ರಮ್ಯಾ ರಾಜಾರಾಮ್, ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ಪ್ರಮುಖರಾದ ಉಮಾನಾಥ ಶೆಟ್ಟಿ ಪೆರ್ನೆ, ಪ್ರಸನ್ನ ಪೆರಿಯಡ್ಕ, ಸಚಿನ್ ಎ.ಎಸ್., ಬ್ರಿಜೇಶ್, ರೂಪೇಶ್ ರೈ ಅಲಿಮಾರ್, ವಿದ್ಯಾಧರ ಜೈನ್, ಶರತ್ ಕೋಟೆ, ಕೆ.ಜಗದೀಶ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕೈಲಾರ್ ರಾಜಗೋಪಾಲ ಭಟ್, ಹೇರಂಭ ಶಾಸ್ತ್ರೀ, ಕೀರ್ತೇಶ್, ಸಂತೋಷ್ ಶೆಟ್ಟಿ, ಕಾರ್ತಿಕ್ ಸೇಠ್, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ತಿಮ್ಮಪ್ಪ ಗೌಡ, ರವಿ ಇಳಂತಿಲ, ವಿಜಯ ಶಿಲ್ಪಿ ಕುಕ್ಕುಜೆ, ಸುದರ್ಶನ್, ಯು.ರಾಮ, ಸದಾನಂದ ಶೆಟ್ಟಿ, ರಾಜಶೇಖರ ರೈ ಕರಾಯ, ಮಾಧವ ಆಚಾರ್ಯ, ಹರೀಶ್ ಬಂಡಾರಿ ಮತ್ತಿತರರಿದ್ದರು.