ಲೈಂಗಿಕ ಕಿರುಕುಳ 
ದಕ್ಷಿಣ ಕನ್ನಡ

ಮೂವರು ಬಾಲಕಿಯರಿಗೆ ಲೈಂಗಿಕ ಕಿರುಕುಳ

ಆಟೋ ಚಾಲಕರಿಬ್ಬರ ವಿರುದ್ಧ ಪೋಕ್ಸೋ ಕೇಸ್

ಕಾಸರಗೋಡು: ಪ್ರತ್ಯೇಕ ದೂರುಗಳಿಗೆ ಸಂಬಂಧಿಸಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೊಲೀಸರು ಮೂರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. 11ರ ಹರೆಯದ ಬಾಲಕಿ ನೀಡಿದ ದೂರಿನಂತೆ ಆಟೋ ಚಾಲಕ ಮಹಮ್ಮದ್‌ಕುಞಿ ಎಂಬಾತನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಮುಹಮ್ಮದ್ ದೈಹಿಕವಾಗಿ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ. ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲೂ ಈತನ ವಿರುದ್ಧ 11 ಹರೆಯದ ಬಾಲಕಿಗೆ ದೈಹಿಕ ಕಿರುಕುಳ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15ರ ಹರೆಯದ ಬಾಲಕಿ ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಚಾಲಕ ಶಿಜು ಎಂಬಾತನ ದೈಹಿಕ ಕಿರುಕುಳ ನೀಡಿರುವುದಾಗಿ ದೂರು ನೀಡಲಾಗಿದೆ. ವೆಳ್ಳರಿಕುಂಡ್ ಠಾಣೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಕೋಳಿ ಅಂಕಕ್ಕೆ ದಾಳಿ, ಮೂವರ ಬಂಧನ

ಕಾಸರಗೋಡು: ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಬಾಡೂರಿನ ಅಮಿನ ಎಂಬಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಡೂರುಪದವಿನ ಸತೀಶ(40), ಅಂಗಡಿಮೊಗರು ಅಮಿನ ಹೌಸ್‌ನ ಎ.ಚಂದ್ರ(47), ಕುರುಡಪದವು ಕೊಮ್ಮಂಗಳದ ಗಣೇಶ್(35) ಬಂಧಿತರು. ಉಳಿದವರು ಓಡಿ ಪರಾರಿಯಾಗಿದ್ದಾರೆ. ಎರಡು ಅಂಕದ ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ.