ಕಾಸರಗೋಡು: ನಗರದ ರೈಲ್ವೆ ನಿಲ್ದಾಣದಲ್ಲಿ ಡೋರ್ಮೆಟ್ರಿ ರಿಸೆಪ್ಶನಿಸ್ಟ್ ಆಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ರೈಲು ನಿಲ್ದಾಣದ ಪಾರ್ಸೆಲ್ ಕಚೇರಿಯ ತಲೆಹೊರೆ ಕಾರ್ಮಿಕ ಹಾಗೂ ಪೆರಿಯಾ ರಾಜಪುರದ ಚೆರುಕ್ಕಪ್ಪಾರ ನಿವಾಸಿ ಕೆ.ಇಸ್ಮಾಯಿಲ್ (47) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಠಡಿಗೆ ಅಕ್ರಮವಾಗಿ ನುಗ್ಗಿದ ಇಸ್ಮಾಯಿಲ್ ಆಕೆಯ ದೇಹ ಸ್ಪರ್ಶಿಸಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕೊಠಡಿಯಿಂದ ಪಾರಾಗಿ ಬಂದ ಯುವತಿ ಇತರ ಸಿಬ್ಬಂದಿಗೆ ವಾಹಿತಿ ನೀಡಿದ್ದು, ಬಳಿಕ ರೈಲ್ವೆ ನಿಲ್ದಾಣದ ಪೊಲೀಸರಿಗೆ ದೂರು ನೀಡಿದ್ದಾರೆ. ಎಸ್ಐ ಬಿ.ಕೆ.ರಾಜೀವರ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ. ಕಾಞಂಗಾಡ್ ಪ್ರಥಮ ದರ್ಜೆ ವ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಕಾಸರಗೋಡು: ಪೊಲೀಸರ ಸೋಗಿನಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡ ರೈಲು ಪ್ರಯಾಣಿಕನ ಬ್ಯಾಗ್ನಿಂದ 25,000 ಸೌದಿ ರಿಯಾಲ್ (ಸುವಾರು 6.35 ಲಕ್ಷ ರೂ.) ದರೋಡೆಗೈದಿರುವ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲಪ್ಪುರಂ ಮಣಿಯೂರು ಪಣಿಯಪ್ಪರಂ ನಿವಾಸಿ ಉಮ್ಮರ್ ಬಾವ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ತಾನು ವೆರಾವಲ್ ಎಕ್ಸ್ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಪರಪ್ಪನಂಗಾಡಿಯಿಂದ ಅ.20ರಂದು ಉಡುಪಿಗೆ ಪ್ರಯಾಣಿಸುತ್ತಿದ್ದಾಗ, ಅಂದು ಬೆಳಗಿನ ಜಾವ 3.15ರ ವೇಳೆಗೆ ರೈಲು ಹೊಸದುರ್ಗ ನಿಲ್ದಾಣ ತಲುಪಿತ್ತು. ತಂಡವೊಂದು ರೈಲಿನೊಳಗೆ ಧಾವಿಸಿ, ತಾವು ಪೊಲೀಸ್ ಇಲಾಖೆಯ ‘ಡಾನ್ಸಾಪ್’ ತಂಡದವರೆಂದು ಪರಿಚಯಿಸಿಕೊಂಡು ತನ್ನ ಬ್ಯಾಗ್ ಕಸಿದುಕೊಂಡು ಸೌದಿ ರಿಯಾಲ್ ನೋಟುಗಳನ್ನು ದರೋಡೆ ಮಾಡಿದ್ದಾರೆಂದು ಉಮ್ಮರ್ ಬಾವ ದೂರಿನಲ್ಲಿ ತಿಳಿಸಿದ್ದಾರೆ. ಹಣ ದೋಚಿದ ತಂಡದ ಪತ್ತೆಗಾಗಿ ಹೊಸದುರ್ಗ ರೈಲು ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ರೈಲ್ವೆ ಪೊಲೀಸರು ಪರಿಶೀಲಿಸಿದ್ದಾರೆ. ಸೌದಿ ರಿಯಾಲ್ಗಳನ್ನು ಕಾಸರಗೋಡು ನಿವಾಸಿಯೊಬ್ಬರಿಗೆ ನೀಡಲು ಉಮ್ಮರ್ ಬಾವ ತಂದಿದ್ದರು ಎಂಬ ವಾಹಿತಿ ಪೊಲೀಸರಿಗೆ ಲಭಿಸಿದೆ. ಸೌದಿ ರಿಯಾಲ್ಗಳ ಅನಧಿಕೃತ ಸಾಗಾಟದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.