ಅಲಂಗಾರ್‌ನಲ್ಲಿ ಅಪಾರ್ಟ್‌ಮೆಂಟ್‌ಗಳಿಂದ ಸಾರ್ವಜನಿಕ ಪ್ರದೇಶಕ್ಕೆ ಹರಿಯುತ್ತಿರುವ ಕೊಳಚೆ ನೀರು.  
ದಕ್ಷಿಣ ಕನ್ನಡ

ತೆರೆದ ಪ್ರದೇಶದಲ್ಲಿ ಕೊಳಚೆ ನೀರು

ಮಂಗಳೂರು-ಕಾರ್ಕಳ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಅಲಂಗಾರು ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳಿಂದ ಹೊರಬರುವ ಶೌಚಗೃಹ ಹಾಗೂ ಒಳಚರಂಡಿ ನೀರು ಸಾರ್ವಜನಿಕ ರಸ್ತೆ ಮತ್ತು ತೆರೆದ ಪ್ರದೇಶಕ್ಕೆ ಹರಿಯುತ್ತಿರುವುದು ಜನರ ಆರೋಗ್ಯ ಹಾಗೂ ಪರಿಸರಕ್ಕೆ ಸಮಸ್ಯೆಯಾಗಿದೆ.

ಮೂಡುಬಿದಿರೆ: ಮಂಗಳೂರು-ಕಾರ್ಕಳ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಅಲಂಗಾರು ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳಿಂದ ಹೊರಬರುವ ಶೌಚಗೃಹ ಹಾಗೂ ಒಳಚರಂಡಿ ನೀರು ಸಾರ್ವಜನಿಕ ರಸ್ತೆ ಮತ್ತು ತೆರೆದ ಪ್ರದೇಶಕ್ಕೆ ಹರಿಯುತ್ತಿರುವುದು ಜನರ ಆರೋಗ್ಯ ಹಾಗೂ ಪರಿಸರಕ್ಕೆ ಸಮಸ್ಯೆಯಾಗಿದೆ.

ಸ್ಥಳೀಯ ಎರಡು ಅಪಾರ್ಟ್‌ಮೆಂಟ್‌ಗಳಿಂದ ಹೊರಬರುವ ಕೊಳಚೆ ನೀರು ರಸ್ತೆ ಬದಿಯಲ್ಲಿ ನಿಂತು ದುರ್ವಾಸನೆ ಹಾಗೂ ಮಾಲಿನ್ಯ ಉಂಟುಮಾಡುತ್ತಿದೆ. ಜನರ ಸಂಚಾರಕ್ಕೂ ಅನನುಕೂಲವಾಗುತ್ತಿದೆ. ಈ ನೀರು ಸಮೀಪದ ಕೆರೆಗೆ ಸೇರುವ ಸಾಧ್ಯತೆಯಿದ್ದು, ನೀರು ಕಲುಷಿತಗೊಳ್ಳುವ ಆತಂಕ ಆವರಿಸಿದೆ. ಸಮೀಪದಲ್ಲೇ ಟಿಬಿ ಆಸ್ಪತ್ರೆ ಇರುವುದರಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಸಾರ್ವಜನಿಕ ಪ್ರದೇಶಕ್ಕೆ ಕೊಳಚೆ ನೀರು ಹರಿಯುತ್ತಿರುವ ಮೂಲ ಪತ್ತೆಹಚ್ಚಿ, ರಸ್ತೆ ಹಾಗೂ ತೆರೆದ ಪ್ರದೇಶಕ್ಕೆ ನೀರು ಹರಿಯುವುದನ್ನು ತಕ್ಷಣ ತಡೆಯಬೇಕು. ಈಗಾಗಲೇ ನಿಂತಿರುವ ನೀರನ್ನು ತೆರವುಗೊಳಿಸಿ ಸ್ಥಳ ಸ್ವಚ್ಛಗೊಳಿಸುವ ಜತೆಗೆ ಅಪಾರ್ಟ್‌ಮೆಂಟ್‌ಗಳಿಗೆ ಸೂಕ್ತ ಒಳಚರಂಡಿ ಹಾಗೂ ನೀರು ಹರಿಸುವ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪರಿಸ್ಥಿತಿಯ ಕುರಿತು ಸ್ಥಳೀಯರು ಹಾಗೂ ನಮ್ಮ ಮೂಡುಬಿದಿರೆ ಫೋರಂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.