ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಡಿಜಿಟಲ್ ಅರೆಸ್ಟ್ 38.48 ಲಕ್ಷ ರೂ. ವಂಚನೆಗೊಳಗಾದ ಹಿರಿಯ ನಾಗರಿಕ

ಮಂಗಳೂರು: ಹಿರಿಯ ನಾಗರಿಕರೊಬ್ಬರಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ ನಿಮ್ಮ ಸಿಮ್ ಪಡೆದುಕೊಂಡು ಅವ್ಯವಹಾರ ನಡೆಸಿದ್ದಾರೆ. ಇದರಿಂದ ನಿಮ್ಮ ವಿರುದ್ಧ ಆರ್‌ಬಿಐ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಬೆದರಿಸಿ 38.48 ಲಕ್ಷ ರೂ. ವಂಚನೆಗೈದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಮನ್ ಕುಮಾರ್ ಶರ್ಮ ಎಂಬಾತ ಕರೆ ಮಾಡಿ ತಾನು ಡಾಟಾ ಪ್ರೊಟೆಕ್ಷನ್ ಬೋರ್ಡ್ ಆ್ ಇಂಡಿಯಾದ ಅಧಿಕಾರಿಯಾಗಿದ್ದು, ಯಾರೋ ನಿಮ್ಮ ಗುರುತಿನ ಕಾರ್ಡ್ ಉಪಯೋಗಿಸಿಕೊಂಡು ತನ್ನ ಹೆಸರಿನಲ್ಲಿ ಸಿಮ್ ನಂಬ್ರ ಪಡೆದುಕೊಂಡು ಅವ್ಯವಹಾರ ನಡೆಸಿರುತ್ತಾರೆ. ಆ ಸಿಮ್‌ನ್ನು ರದ್ದು ಮಾಡಲು ಮುಂಬಯಿಯ ಕೊಲಬಾ ಪೊಲೀಸ್ ಠಾಣೆಗೆ ಮಾತನಾಡಿ ಎಂದು ಹೇಳಿ ಕೊಲಬಾ ಪೊಲೀಸ್ ಠಾಣೆಗೆ ೆನ್ ಸಂಪರ್ಕ ನೀಡಿದ್ದ. ನಂತರ ದೂರುದಾರರ ಗುರುತಿನ ಕಾರ್ಡ್ ನಂಬರ್ ಕೇಳಿದ್ದು, ತನ್ನ ಗುರುತಿನ ಕಾರ್ಡ್ ನಂಬ್ರ ನೀಡಿರುತ್ತಾರೆ. ಆಗ ಅವರು ಗುರುತಿನ ಕಾರ್ಡ್ ಉಪಯೋಗಿಸಿಕೊಂಡು ತನ್ನ ಹೆಸರಿನಲ್ಲಿ ಒ.ಎಂ ಅಬ್ದುಲ್ ಸಲಾಮ್ ಎಂಬವರು ಕೆನರಾ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದಿರುತ್ತಾರೆ. ಆ ಖಾತೆಗೆ ಸುಮಾರು 2ಕೋಟಿ ಹಣ ವರ್ಗಾವಣೆಯಾಗಿದ್ದು, ಆ ಹಣದಲ್ಲಿ 20 ಲಕ್ಷ ರೂ. ನಿಮಗೆ ಕಮೀಷನ್ ಆಗಿ ಬಂದಿರುತ್ತದೆ. ಈ ಹಣದ ವರ್ಗಾವಣೆಯ ಮೇಲೆ ನಿಮ್ಮ ವಿರುದ್ದ ಕೇಸ್ ಆಗಿರುತ್ತದೆ. ನಿಮ್ಮ ಮೇಲೆ ಸುಪ್ರೀಂ ಕೋರ್ಟಿನಿಂದ ಅರೆಸ್ಟ್ ವಾರಂಟ್ ಆಗಿರುತ್ತದೆ, ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಹೆದರಿಸಿದ್ದಾರೆ.
ಒಂದು ವೇಳೆ ನೀವು ಇದರಿಂದ ಬಚಾವ್ ಆಗಬೇಕಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನೆಲ್ಲಾ ಆರ್‌ಬಿಐ ಗೆ ವರ್ಗಾವಣೆ ಮಾಡಬೇಕು, ಆರ್‌ಬಿಐಯಲ್ಲಿ ನಿಮ್ಮ ಹಣವನ್ನು ಒ.ಎಂ ಅಬ್ದುಲ್ ಸಲಾಮ್‌ರವರ ಬ್ಯಾಂಕ್ ಖಾತೆಯಲ್ಲಿರುವ ಹಣದೊಂದಿಗೆ ಚೆಕ್ ಮಾಡಿ ನಿಮ್ಮ ಹಣವನ್ನು ನಿಮಗೆ ವಾಪಾಸು ನೀಡಲಾಗುವುದು ಎಂದು ಕೊಲಬಾ ಪೊಲೀಸರು ಹೇಳಿರುತ್ತಾರೆ. ದೂರುದಾರರು ಇದನ್ನು ಸತ್ಯವೆಂದು ನಂಬಿ ಹಂತ ಹಂತವಾಗಿ ಒಟ್ಟು 34,48,094ರೂ. ವರ್ಗಾಯಿಸಿರುತ್ತಾರೆ. ಬಳಿಕ ಅಪರಿಚಿತರು ಹಣವನ್ನು ವಾಪಾಸ್ ನೀಡಿರುವುದಿಲ್ಲ.
ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಮೋಸದಿಂದ ಒಟ್ಟು 34,48,094ರೂ. ಹಣವನ್ನು ವರ್ಗಾಯಿಸಿಕೊಂಡು ಆನ್‌ಲೈನ್ ವಂಚನೆ ಮಾಡಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.