ಸಾಧನಾ ಸಮಾವೇಶ ಹಾಗೂ ವಾರ್ಷಿಕೋತ್ಸವ ಮನೋಹರ್ ಭಟ್ ಉದ್ಘಾಟಿಸಿದರು. ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಪ್ರಗತಿಪರ ಕೃಷಿಕ ಜಯರಾಮ ಸಾಂತ, ವಲಯ 1ರ ಯೋಜನಾ ನಿರ್ದೇಶಕ ದಿನೇಶ್ ಡಿ., ರೋಟರಿ ಕ್ಲಬ್ ಅಧ್ಯಕ್ಷ ವಚನ್ ಶೆಟ್ಟಿ ಮತ್ತಿತರರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಗಳೂರು ತಾಲೂಕು, ಕೊಣಾಜೆ ವಲಯ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಸಾಧನಾ ಸಮಾವೇಶ ಹಾಗೂ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಸಾಧಕರಿಗೆ ಗೌರವಾರ್ಪಣೆ
ಪ್ರಗತಿಪರ ಕೃಷಿಕರಾದ ಪುಷ್ಪಲತಾ, ಗಣೇಶ್, ಸುರಕ್ಷಾಧಿಕಾರಿ ವಸಂತ ಪೆರಾಜೆ, ಸುಡುಮದ್ದು ಸೇವೆಗಾಗಿ ಇಸ್ಮಾಯಿಲ್, ಅಂಚೆ ಪಾಲಕ ಜನಾರ್ದನ ಮೂಲ್ಯ, ಸಂಘದ ಮೇಲ್ವಿಚಾರಕರಾಗಿದ್ದ ಮಾಧವ, ಕ್ರೀಡಾಪಟು ತೃಷಾ ಶೆಟ್ಟಿ, ಪಿಎಚ್‌ಡಿ ಪದವೀಧರೆ ಸೌಮ್ಯಾ ಹಾಗೂ ಕರಾಟೆಪಟು ಸೃಜನ್ ಅವರನ್ನು ಸನ್ಮಾನಿಸಲಾಯಿತು. ಸೇವಾ ಪ್ರತಿನಿಧಿಗಳನ್ನು ಗೌರವಿಸಲಾಯಿತು.