ಬಂಟ್ವಾಳ: ದೀನ ದುರ್ಬಲರ ಸೇವೆಯಲ್ಲಿಯೇ ದೇವರನ್ನು ಕಾಣುವ ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ ಕಾರ್ಯ ಮಾದರಿ ಎಂದು ಬಂಟ್ವಾಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಝ್ ಎಚ್.ಟಿ. ಹೇಳಿದರು.
ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕಾಹಾರ ಹಾಗೂ ದವಸ ಧಾನ್ಯ ವಿತರಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ಡೇವಿಡ್ ಮಾತನಾಡಿ, ಕೃಷ್ಣ ಕುಮಾರ್ ಪೂಂಜ ಕ್ಷಯರೋಗಿಗಳಿಗೆ ಆಹಾರ ಕಿಟ್ ನೀಡುವುದರ ಜತೆಗೆ ಪ್ರತಿ ರೋಗಿಯ ಆಹಾರದ ಕಾಳಜಿ ವಹಿಸುತ್ತಾರೆ. ಆರೋಗ್ಯ ಇಲಾಖೆ ಮಾಡುವ ಅರ್ಧ ಕೆಲಸವನ್ನು ಅವರೇ ಮಾಡುತ್ತಾರೆ ಎಂದರು.
ಫರಂಗಿಪೇಟೆ ಆಂಜನೇಯ ದೇವಸ್ಥಾನದ ಅಧ್ಯಕ್ಷ ಎಸ್.ಚಂದ್ರಶೇಖರ ಗಾಂಭೀರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರೋಗ್ಯ ಇಲಾಖೆಯ ಮೀನಾಕ್ಷಿ ನಾರಾಯಣ, ಟ್ರಸ್ಟಿ ಪ್ರಕಾಶ್ ಕಿದೆಬೆಟ್ಟು, ಪ್ರಮುಖರಾದ ನಾರಾಯಣ ಬಡ್ಡೂರು, ಪ್ರಶಾಂತ್ ತುಂಬೆ, ಶೇಖರ ಕಲ್ಲತಡಮೆ, ಚಂದ್ರಹಾಸ ಕಡೆಗೋಳಿ, ವೃಂದಾ ಪೂಜಾರಿ, ಶೋಭಾ ಕಳ್ಳಿಗೆ, ಗಾಯತ್ರಿ, ಉಮಾಚಂದ್ರಶೇಖರ್, ಸಾರಮ್ಮ ಉಪಸ್ಥಿತರಿದ್ದರು. ಯೆನೆಪೋಯ ಆಸ್ಪತ್ರೆಯ ಸಮುದಾಯ ಅಭಿವೃದ್ಧಿ ವಿಭಾಗದ ಡಾ.ಮಾಳವಿಕಾ, ಡಾ.ಅನುಪಮಾ ನಾಯರ್ ಕ್ಷಯ ರೋಗಿಗಳ ಆರೋಗ್ಯ ಪರೀಕ್ಷಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, 50ನೇ ತಿಂಗಳ ಕಾರ್ಯಕ್ರಮ ಇದಾಗಿದ್ದು ಸುಮಾರು 18.50 ಲಕ್ಷ ರೂ. ವೆಚ್ಚದಲ್ಲಿ ಈವರೆಗೆ ಒಟ್ಟು 268 ಮಂದಿ ಕ್ಷಯ ರೋಗಿಗಳಿಗೆ ಕಿಟ್ ವಿತರಿಸಲಾಗಿದೆ.ಕೃಷ್ಣಕುಮಾರ್ ಪೂಂಜ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ