ಮಂಗಳೂರು: ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಮಕ್ಕಳನ್ನು ಉತ್ತೇಜಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ನಡೆಯುತ್ತಿರಬೇಕು. ಈ ಮೂಲಕ ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆ ಕಲ್ಪಿಸಬೇಕು ಎಂದು ನಟಿ ನಿರೀಕ್ಷಾ ಶೆಟ್ಟಿ ಹೇಳಿದರು.
ಎಸ್ಸಿಎಸ್ ಪಿಯು ಕಾಲೇಜು ವತಿಯಿಂದ ಉರ್ವ ಕಾಲೇಜು ಕ್ಯಾಂಪಸ್ನಲ್ಲಿ ಎಸ್ಸಿಎಸ್ ತರಂಗ್-2026 ಕಲ್ಚರಲ್ ಮತ್ತು ಕ್ರೀಡಾ ಸ್ಪರ್ಧೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಎಸ್ಸಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ರಜನೀಶ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ನಟಿ ನಿರೀಕ್ಷಾ ಶೆಟ್ಟಿ ಮತ್ತು ಸಾಧಕ ಕ್ರೀಡಾಪಟು ಅಲಿನಾ ರಿಯಾ ಪತ್ರಾವೊ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಅಭಿನಯ್ ಸೊರಕೆ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಯು.ಕೆ.ಖಾಲಿದ್, ಸಲಹೆಗಾರ ಎಂಡೋ ಪಾಲ್, ಕಾಲೇಜಿನ ಪ್ರಾಂಶುಪಾಲ ಹಾರ್ದಿಕ್ ಪಿ. ಚೌಹಾಣ್, ಸಹೋದರ ಸಂಸ್ಥೆ ಎಸ್ಸಿಎಸ್ ರಿವರ್ಸೈಡ್ ಇಂಟರ್ನ್ಯಾಷನಲ್ ಅಕಾಡೆಮಿಯ ಪ್ರಾಂಶುಪಾಲ ಹೆಲೆನ್ ಲೋಬೊ, ಎಸ್ಸಿಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ರಾಜಾರಾಮ್ ರಾವ್, ಕೋ-ಆರ್ಡಿನೇಟರ್ ಉಪನ್ಯಾಸಕಿ ಕಲಾವತಿ ಮಾಧವ ರಾವ್, ಸ್ಟೂಡೆಂಟ್ ಕೌನ್ಸಿಲ್ನ ಅಧ್ಯಕ್ಷೆ ದೀಕ್ಷಿತಾ ಉಪಸ್ಥಿತರಿದ್ದರು.
ಉಪನ್ಯಾಸಕಿ ಚೈತ್ರಾ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಗೂ ಮುನ್ನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮಾತೆಗೆ ದೀಪ ಬೆಳಗಿಸಲಾಯಿತು. ಎಸ್ಸಿಎಸ್ ‘ತರಂಗ್-2026’ ಕಲ್ಚರಲ್ ಮತ್ತು ಸ್ಪೋಟ್ಸ್ ೆಸ್ಟ್ನಲ್ಲಿ 9 ಮತ್ತು 10ನೇ ತರಗತಿಯ 200ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಸ್ಥೆಯಲ್ಲಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳ ಆಯೋಜನೆಯ ಮೂಲಕ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿದ್ದೇವೆ. ವಿದ್ಯಾರ್ಥಿಗಳು ವೃತ್ತಿಪರರಾಗಿ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಭದ್ರ ಬುನಾದಿ ಹಾಕಿಕೊಡಲಾಗುತ್ತಿದೆ.ಡಾ.ರಜನೀಶ್ ಸೊರಕೆ, ಎಸ್ಸಿಎಸ್ ಸಂಸ್ಥೆ ಅಧ್ಯಕ್ಷ