ಕಾಸರಗೋಡು: ಜನವಾಸವಿಲ್ಲದ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಬೆಂಕಿಗಾಹುತಿಯಾಗಿರುವ ಬಗ್ಗೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ತಾಳಿಪಡ್ಪು ನಿವಾಸಿ ಶೋಭರಾಜ್ ಎಂಬುವರು ನೀಡಿದ ದೂರಿನನ್ವಯ ಈ ಕೇಸು.
ಅಡ್ಕತ್ತಬೈಲ್ ಅರ್ಜಾಲ್ ರಸ್ತೆಯ ತೋಟತ್ತಡಿಯ ಜನವಾಸವಿಲ್ಲದ ಮನೆಯೊಂದರ ಅಂಗಳದಲ್ಲಿ ಶುಕ್ರವಾರ ಸ್ಕೂಟರ್ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದು, ಅಲ್ಲಿಂದ ಹಿಂತಿರುಗಿದ ವೇಳೆ ಬೆಂಕಿ ತಗುಲಿ ಸಂಪೂರ್ಣ ಕರಕಲುಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯದ ಮಾಹಿತಿ ಸಂಗ್ರಹಿಸಿದ್ದಾರೆ.