ಮೂಲ್ಕಿ: ವಿದ್ಯಾರ್ಥಿನಿಯರಿಗೆ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆ ಹಿತ ದೃಷ್ಟಿಯಿಂದ ಮಹತ್ವದ ನೆರವು ಒದಗಿಸುವ ಅಂಗವಾಗಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ವತಿಯಿಂದ ಸ್ಯಾನಿಟರಿ ಪ್ಯಾಡ್ ಬರ್ನರ್ ಯಂತ್ರ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಸೌಮ್ಯಾ ಅನಿಲ್ ಹೇಳಿದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ವತಿಯಿಂದ ವಿಜಯ ಕಾಲೇಜಿಗೆ ಸ್ಯಾನಿಟರಿ ಪ್ಯಾಡ್ ಬರ್ನರ್ ಯಂತ್ರ ಹಸ್ತಾಂತರಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಅಧ್ಯಕ್ಷ ಅನಿಲ್ ಕುಮಾರ್, ಪ್ರಥಮ ಉಪಾಧ್ಯಕ್ಷ ಪುಷ್ಪರಾಜ ಚೌಟ, ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ ಭಟ್, ಪಪೂ ಕಾಲೇಜಿನ ಪ್ರಾಂಶುಪಾಲ ಪ್ರೊ.ಅರುಣ್ ಕುಮಾರ್, ಉಪನ್ಯಾಸಕಿ ಹರ್ಷಿತಾ ರಾವ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ಸದಸ್ಯರಾದ ಸುಧೀರ್ ಎನ್.ಬಾಳಿಗ, ಪ್ರಣವ ಶರ್ಮ, ಎನ್ನೆಸ್ಸೆಸ್ ಘಟಕ ಸಹಯೋಜನಾಧಿಕಾರಿ ಶರ್ಮಿಳಾ ರಾಜೇಶ್, ಕಾರ್ಯದರ್ಶಿ ರಿತೇಶ್, ಲಾವಣ್ಯ ಇದ್ದರು.