ದಕ್ಷಿಣ ಕನ್ನಡ

ಸಾಲ ನೀಡುವ ನೆಪದಲ್ಲಿ 2.18 ಲಕ್ಷ ರೂ. ವಂಚನೆ

ಮಂಗಳೂರು: ಸಾಲ ನೀಡುವ ನೆಪದಲ್ಲಿ ಅಪರಿತ ವ್ಯಕ್ತಿ ವೈಯಕ್ತಿಕ ಮಾಹಿತಿಗಳನ್ನು ಪಡೆದು 2.18 ಲಕ್ಷ ರೂ. ವಂಚಿಸಿರುವ ಬಗ್ಗೆ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

47 ವರ್ಷದ ದೂರುದಾರರು ಅ.8ರಂದು ಪೇಸ್ ಬುಕ್ ನೋಡುತ್ತಿರುವಾಗ ಧನಿ ಫೈನಾನ್ಸ್ ಎಂಬ ಸಂಸ್ಥೆಯ ಜಾಹೀರಾರ ನೋಡಿ, ಜಾಹೀರಾತನ್ನು ಕ್ಲಿಕ್ ಮಾಡಿ ಸುಮ್ಮನಾಗಿರುತ್ತಾರೆ. ಅ.9ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಧನಿ ಫೈನಾನ್ಸ್ ಮ್ಯಾನೇಜರ್ ಹರೀಶ್ ಪಿ.ವಿ. ಎಂದು ತಿಳಿಸಿದ್ದಾನೆ. ನಿಮಗೆ ಲೋನ್ ಅವಶ್ಯಕತೆಯಿದ್ದಲ್ಲಿ ಸಂಸ್ಥೆಯಿಂದ ಗರಿಷ್ಠ 8 ಲಕ್ಷ ರೂ. ಸಾಲ ನೀಡಬಹುದು. ಅದಕ್ಕೂ ಮೊದಲು ಕೆಲವೊಂದು ಪ್ರಕ್ರಿಯೆಗಳಿದ್ದು, ಅದನ್ನು ಮುಗಿಸುವಂತೆ ತಿಳಿಸಿದ್ದಾನೆ,

ಅದರಂತೆ ದೂರುದಾರು ಗುರುತಿನ ಕಾರ್ಡ್, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಪ್ರತಿಗಳನ್ನು ಗಳನ್ನು ಆತ ತಿಳಿಸಿದ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾಡಿದ್ದಾರೆ. ಆ ಬಳಿಕ ಅಪ್ಲಿಕೇಷನ್ ಫೀಸ್, ಲೋನ್ ಪಡೆಯಲು ಇನ್ಶೂರೆನ್ಸ್ ಫೀಸ್, ಬಿಟಿಸಿ ಚಾರ್ಜ್, ಆರ್‌ಬಿಐ ಚಾರ್ಜ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಚಾರ್ಜ್, ಪ್ರೊಸೆಸ್ ಚಾರ್ಜ್ ಎಂದು ಹೇಳಿ ಒಟ್ಟು 2,18,041 ರೂ. ವರ್ಗಾಯಿಸಿದ್ದಾರೆ. ಆ ಬಳಿಕ ಅವರಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ.

ಯಾರೋ ಅಪರಿಚಿತ ವ್ಯಕ್ತಿ ಲೋನ್ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದು, ವಂಚಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.