ಮಂಗಳೂರು: ಷೇರು ಮಾರುಕಟ್ಟೆ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎನ್ನುವ ಆಮಿಷವೊಡ್ಡಿ ಅಪರಿಚಿತರು 12.87 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಜೂ.13ರಂದು ಮೊಬೈಲ್ ನಲ್ಲಿ ವಾಟ್ಸ್ ಪ್ ನೋಡುತ್ತಿದ್ದಾಗ ಒ್ಠ್ಝಜ್ಠಿ ಆಛ್ಟಿ ಎ್ಟಟ್ಠ ಔಠಿ ಎಂಬ ಕಂಪನಿಯ ಹೆಸರಿನಲ್ಲಿ ವಾಟ್ಸ್ ಪ್ ಗ್ರೂಪ್‌ಗೆ ಯಾರೋ ಅಪರಿಚಿತರು ಸೇರಿಸಿದ್ದಾರೆ. ಬಳಿಕ ಅದರಲ್ಲಿ ಷೇರು ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ಮೇಸೆಜ್ ಮಾಡುತ್ತಿದ್ದರು.
ಬಳಿಕ ಸೋನಲ್ ಜಗನ್ನಾಥ್ ಹಾಗೂ ಇತರರು ವಾಟ್ಸ್ ಪ್ ಕರೆಯ ಮೂಲಕ ಇನ್ವೆಸ್ಟ್ ಮೆಂಟ್ ನ ಬಗ್ಗೆ ತಿಳಿಸಿ, ಒಆ ಗಿಣ್ಞಛಿ ಎಂಬ ಆ್ಯಪ್ ಡೌನ್ ಲೋಡ್ ಮಾಡಿ ಅದರಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣಗಳಿಸಬಹುದೆಂದು ನಂಬಿಸಿದ್ದಾರೆ.
ಈ ಬಗ್ಗೆ ಆಸಕ್ತರಾದ ದೂರುದಾರರು, ಜು.14ರಂದು 5 ಸಾವಿರ ರೂ. ವನ್ನು ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಯುಪಿಐ ಮಾಡಿದ್ದಾರೆ. ಅದಕ್ಕೆ ಲಾಭಾಂಶವಾಗಿ 5,250 ರೂ. ಹಿಂಪಡೆದಿದ್ದಾರೆ.
ಬಳಿಕ ಇದನ್ನು ನಂಬಿ ಹೆಚ್ಚಿನ ಲಾಭಾಂಶ ಪಡೆಯುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ದಿನಾಂಕ ಜು.14ರಿಂದ ಆ.3ರ ವರೆಗೆ ಹಂತ ಹಂತವಾಗಿ ಒಟ್ಟು 12,87,108 ರೂ. ನೆಫ್ಟ್ ಮತ್ತು ಆರ್ ಟಿಜಿಎಸ್ ಮಾಡಿದ್ದಾರೆ.
ಅನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಅಪರಿಚಿತ ವ್ಯಕ್ತಿಗಳು ತಿಳಿಸಿದ್ದಾರೆ. ಜತೆಗೆ ಈಗಾಗಲೇ ಹೂಡಿಕೆ ಮಾಡಿರುವ ಹಣ ಹಿಂಪಡೆಯಲು ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ ಹೂಡಿಕೆ ಮಾಡಲು ಹಣ ಇಲ್ಲದೇ ಇದ್ದುದರಿಂದ ಸ್ವಲ್ಪ ದಿನ ಕಾದರೂ, ಹೂಡಿಕೆ ಮಾಡಿದ ಹಣ ಡ್ರಾ ಮಾಡಲು ಆಗಿಲ್ಲ. ಆಗ ಆನ್ ಲೈನ್ ಮೂಲಕ ಮೋಸ ಹೋಗಿರುವ ಬಗ್ಗೆ ಅರಿವಾಗಿದೆ.
ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮೂಲಕ ಹಣ ಹೂಡಿಕೆಯ ಆಮಿಷವೊಡ್ಡಿ ಮೋಸದಿಂದ ವರ್ಗಾಯಿಸಿ ಮೋಸ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.