ಪ್ರಾಂತ್ಯ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ ಅತಿಕ್ರಮಣಗೊಂಡಿರುವುದು. 
ದಕ್ಷಿಣ ಕನ್ನಡ

ಪ್ರಾಂತ್ಯ ಗ್ರಾಮದಲ್ಲಿ ರಸ್ತೆ ಅತಿಕ್ರಮಣ : ಮೂಡುಬಿದಿರೆ ಪೊಲೀಸ್ ನಿರೀಕ್ಷಕರಿಂದ ತಡೆ

ಸ್ಥಳೀಯರ ಮನವಿಗೆ ಸ್ಪಂದಿಸಿದ ನಿರೀಕ್ಷಕರು ತಕ್ಷಣವೇ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ, ಅತಿಕ್ರಮಣಕಾರರು ಸ್ವಲ್ಪ ಸಮಯ ಕೆಲಸ ನಿಲ್ಲಿಸಿದಂತೆ ಮಾಡಿ, ಅರ್ಧ ಗಂಟೆಯಲ್ಲೇ ಪುನಃ ಕಾಮಗಾರಿ ಮುಂದುವರಿಸಿದ್ದರು. ಈ ವಿಷಯ ನಿರೀಕ್ಷಕರಿಗೆ ತಿಳಿಯುತ್ತಿದ್ದಂತೆಯೇ ಅವರು ಸ್ವತಃ ಸ್ಥಳಕ್ಕೆ ಧಾವಿಸಿ, ಕಾಮಗಾರಿಯನ್ನು ಸ್ಥಗಿತಗೊಳಿಸಿದರು.