accident 
ದಕ್ಷಿಣ ಕನ್ನಡ

ಬರೆಗೆ ಡಿಕ್ಕಿ ಹೊಡೆದ ರಿಕ್ಷಾ, ನಾಲ್ವರಿಗೆ ಗಾಯ

ಕಡಬ ಪೊಲೀಸ್ ಠಾಣೆಗೆ ದೂರು

ಕಡಬ: ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ರಸ್ತೆಯ ಬದಿ ಚರಂಡಿಗೆ ಇಳಿದು ಬರೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕುಂತೂರು ಗ್ರಾಮದ ಪದವು ಮುರ ಚಡವು ಎಂಬಲ್ಲಿ ನಡೆದಿದೆ.

ಬೆಳ್ಳಾರೆ ಮೂಲದವರಾದ ಆಟೋ ಚಾಲಕ ರಮೇಶ್(36) ಹಾಗೂ ಪ್ರಯಾಣಿಕರಾದ ಭರತ್(29), ಲಕ್ಷ್ಮಣ(34) ಮತ್ತು ಇಳವರಸನ್(31) ಗಾಯಗೊಂಡಿದ್ದಾರೆ. ಆಟೋ ಚಾಲಕ ರಮೇಶ್ ಅವರ ಅಜಾಗರೂಕತೆ ಹಾಗೂ ನಿರ್ಲಕ್ಷೃ ಚಾಲನೆಯಿಂದ ತಿರುವಿನಲ್ಲಿ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.