ನವಕೇರಳ ನಾಗರಿಕ ಸ್ಪಂದನಾ ಕಾರ್ಯಕ್ರಮದನ್ವಯ ಕ್ರಿಯಾ ಸೇನೆ ಸದಸ್ಯರ ಅವಲೋಕನಾ ಸಭೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ಜರುಗಿತು. ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್.ಲಾರೆನ್ಸ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಬಾಲಕೃಷ್ಣನ್, ಕೆ.ಅನಿಲ್ ಕುಮಾರ್ ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ಮನೆ ಭೇಟಿ ಕಾರ್ಯ ಚಟುವಟಿಕೆ ಶ್ಲಾಘನೀಯ : ಕೆ.ಇನ್ಬಾಶೇಖರ್

ಚಟುವಟಿಕೆಗಳ ಪ್ರಸ್ತುತ ಪ್ರಗತಿ, ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲಾಯಿತು. ಉಳಿದ ಚಟುವಟಿಕೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಮತ್ತು ಕಲ್ಯಾಣ ಅಧ್ಯಯನ ಕಾರ್ಯಕ್ರಮದ ಜಿಲ್ಲಾಮಟ್ಟದ ಪರಿಶೀಲನಾ ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಪಿ.ಸುಧಾಕರನ್, ಎಂ.ಗೌತಮ್ ಆನ್‌ಲೈನ್ ಮೂಲಕ ಪಾಲ್ಗೊಂಡರು. ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ.ಮಧುಸೂಧನನ್ ವರದಿ ಮಂಡಿಸಿದರು.
ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್.ಲಾರೆನ್ಸ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಬಾಲಕೃಷ್ಣನ್, ಕೆ.ಅನಿಲ್ ಕುಮಾರ್, ವಿಧಾನಸಭಾ ಕ್ಷೇತ್ರ ಉಸ್ತುವಾರಿ ಅಧಿಕಾರಿಗಳಾದ ಕೆ.ವಿ.ಸುಧಾಕರನ್, ಕೆ.ಸಜಿತ್ ಕುಮಾರ್, ಕೆ.ವಿ.ಮನೋಜ್ ಕುಮಾರ್, ಎ.ರವೀಂದ್ರ, ಕೆ.ನಾಗೇಶ್, ತರಬೇತುದಾರರಾದ ಪಿ.ಎಂ.ನಂದಕುಮಾರ್, ಟಿ.ವಿ.ವಿನೋದ್ ಕುಮಾರ್, ಪಂಚಾಯಿತಿ ಮುಖ್ಯ ಪ್ರಭಾರ ಅಧಿಕಾರಿಗಳಾದ ಕೆ.ಹರೀಶ, ಎಂ.ಜಿ.ವಿಜಯನ್, ಬಿ.ಉಷಾ, ವಿ.ವಿ.ಶಿಜಿ ಮತ್ತಿತರರು ಉಪಸ್ಥಿತರಿದ್ದರು.