ಸಭಾ ಕಾರ್ಯಕ್ರಮವನ್ನು ಕಡಬ ಪಪಂ ಅಧ್ಯಕ್ಷೆ ತಮನ್ನಾ ಜಬೀನ್ ಉದ್ಘಾಟಿಸಿದರು. ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್, ಪಪಂ ಮುಖ್ಯಾಧಿಕಾರಿ ಲೀಲಾವತಿ, ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೇವರಾಜ್ ಉಪಸ್ಥಿತರಿದ್ದರು.
ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕಡಬ ಆಡಳಿತ ಸೌಧದಲ್ಲಿ ತಹಸೀಲ್ದಾರ್ ಪ್ರಭಾಕರ ಖಜೂರೆ ಧ್ವಜಾರೋಹಣ ನೆರವೇರಿಸಿದರು.
ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ನೇತೃತ್ವದ ಪೊಲೀಸರಿಂದ ಧ್ವಜವಂದನೆ ನಡೆಯಿತು. ಕಡಬ ಸೇಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕಡಬ ಪಪಂ ಅಧ್ಯಕ್ಷೆ ತಮನ್ನಾ ಜಬೀನ್ ಉದ್ಘಾಟಿಸಿದರು. ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ಪ್ರಧಾನ ಭಾಷಣ ಮಾಡಿದರು. ಕಡಬ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಹನ್ೀ, ಜಿಪಂ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ನಿವೃತ ಶಿಕ್ಷಕ ಜನಾರ್ದನ ಗೌಡ ಪಣೆಮಜಲು ಶುಭಹಾರೈಸಿದರು.
ಪಪಂ ಮುಖ್ಯಾಧಿಕಾರಿ ಲೀಲಾವತಿ, ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೇವರಾಜ್, ಪ್ರೌಢಶಾಲಾ ಉಪಪ್ರಾಂಶುಪಾಲೆ ಡಾ.ವೇದಾವತಿ, ಸಂಸ್ಥೆ ಮುಖ್ಯಸ್ಥ ಸುನೀಲ್ ಪ್ರವೀಣ್ ಪಿಂಟೋ, ಪಪಂ ಸದಸ್ಯರು ಉಪಸ್ಥಿತರಿದ್ದರು.
ನಿವೃತ್ತ ಯೋಧ ಜೆಪಿಎಂ ಚೆರಿಯಾನ್, ನಿವೃತ್ತ ಶಿಕ್ಷಕ ಶಿವರಾಮ ಗೌಡ ಕೋಡಿಂಬಾಳ, ನಿವೃತ್ತ ಪೊಲೀಸ್ ಅಧಿಕಾರಿ ದಾಮೋದರ ಐನೆಕಿದು, ಅಂಗನವಾಡಿ ಕಾರ್ಯಕತೆಯರಾದ ಪಾರ್ವತಿ ನೆಲ್ಯಾಡಿ, ರೋಹಿಣಿ ಬಿಳಿನೆಲೆ, ಸುಚರಿತಾ, ವಿವಿಧ ಕ್ರೀಡಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಸ್ವಾಗತಿಸಿದರು.
ಪಪಂ ಸಿಬ್ಬಂದಿ ಹರೀಶ್ ಬೆದ್ರಾಜೆ ವಂದಿಸಿದರು. ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು.