ಭಜನೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಮಾತನಾಡಿದರು. ಪ್ರಮುಖರಾದ ಸಂತೋಷ ಕುಮಾರ್ ಚೌಟ, ರಮೇಶ ಕುಲಶೇಖರ, ರವೀಂದ್ರ ನಾಯಕ್ ಕಿನ್ನಾಜೆ, ಲಿಂಗಪ್ಪ ಪೂಜಾರಿ ನೆಕ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.  
ದಕ್ಷಿಣ ಕನ್ನಡ

ಭಜನೆಯಿಂದ ಧಾರ್ಮಿಕ ಸಂಪ್ರದಾಯ ಉಳಿವು

 ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಭಜನೆಗಳ ಮೂಲಕ ಜನ ಮಾನಸದಲ್ಲಿ ಧಾರ್ಮಿಕ ಭಕ್ತಿ, ಸಂಪ್ರದಾಯಗಳು, ಸಂಸ್ಕಾರಗಳು ಉಳಿಯಲು ಸಾಧ್ಯ ಇದರಿಂದ ಹಿಂದೂ ಸಮಾಜದ ಸಂಘಟನೆ ಗಟ್ಟಿಯಾಗಲಿದ್ದು, ಒಗ್ಗಟ್ಟಿನಲ್ಲಿ ಹಿಂದೂ ಸಮಾಜದ ಮೇಲೆ ಜರುಗುವ ಎಲ್ಲ ಅಡ್ಡಿ ಆತಂಕ ಎದುರಿಸಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ಸಂದೇಶ ಶೆಟ್ಟಿ ಅರೆಬೆಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.
 ಕರ್ಪೆ ಗ್ರಾಮದ ನೆಕ್ಲಾಜೆಯಲ್ಲಿ ಯಕ್ಷಗಾನ ಬಯಲಾಟ ಸಂದರ್ಭ ಜರುಗಿದ ಭಜನೆ ಕಾರ್ಯಕ್ರಮದಲ್ಲಿ ಕುಣಿತ ಭಜನೆ ತಂಡಗಳನ್ನು ಗೌರವಿಸಿ ಮಾತನಾಡಿದರು. 
 ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ, ಈ ಹಿಂದೆ ಎಲ್ಲ ಮನೆಗಳಲ್ಲಿಯೂ ನಿತ್ಯವೂ ನಡೆಯುತ್ತಿದ್ದ ಭಜನೆ ಇದೀಗ ಮಾಯವಾಗುತ್ತಿರುವುದರಿಂದ ಪ್ರತಿಯೊಂದು ಮನೆಯಲ್ಲಿ ಕೌಟುಂಬಿಕ ಕಲಹ ಹೆಚ್ಚಾಗುತ್ತಿದ್ದು ಕುಟುಂಬಗಳು ವಿಭಜನೆಯಾಗುತ್ತಿವೆ. ಇದರಿಂದ ಅವಿಭಕ್ತ ಕುಟುಂಬ ಪದ್ಧತಿ ನಿಂತು ಹೋಗಿದ್ದು ಮುಂದಿನ ಸಮಾಜದ ನಿರ್ಮಾಣಕ್ಕೆ ಮಕ್ಕಳಿಗೆ ಸಂಸ್ಕಾರದ ಪಾಠ ಅಗತ್ಯವಿದೆ ಎಂದರು.
 ಬರೋಡ ಬ್ಯಾಂಕ್ ಅಧಿಕಾರಿ ಸಂತೋಷ ಕುಮಾರ್ ಚೌಟ, ಸುಂಕದಕಟ್ಟೆ ಮೇಳದ ವ್ಯವಸ್ಥಾಪಕ ರಮೇಶ ಕುಲಶೇಖರ, ಶಿಕ್ಷಕ ರವೀಂದ್ರ ನಾಯಕ್ ಕಿನ್ನಾಜೆ, ಪ್ರಮುಖರಾದ ಲಿಂಗಪ್ಪ ಪೂಜಾರಿ ನೆಕ್ಲಾಜೆ, ರಾಜೇಂದ್ರ ಪೂಜಾರಿ, ಸುಂದರ ಪೂಜಾರಿ, ಚಂದ್ರಶೇಖರ ಗೌಡ ರಾಯಿ, ಪೊಳಲಿ ಸಂತೋಷ್ ಉಪಸ್ಥಿತರಿದ್ದರು. ದಾಮೋದರ ಪೂಜಾರಿ ಕರ್ಪೆ ನಿರೂಪಿಸಿದರು.