ಕುಕ್ಕೆಶ್ರೀ ಸುಬ್ರಹ್ಮಣ್ಯ ದೇಗುಲ 
ದಕ್ಷಿಣ ಕನ್ನಡ

4 ಲಕ್ಷದ 60 ಸಾವಿರ ಭಕ್ತರಿಗೆ ಅನ್ನಪ್ರಸಾದ : ಕುಕ್ಕೆ ಕ್ಷೇತ್ರದಲ್ಲಿ ದಾಖಲೆ ಸಂಖ್ಯೆಯ ಭಕ್ತರಿಗೆ ಊಟೋಪಚಾರ

5 ಕಡೆ ಸ್ವೀಕಾರಕ್ಕೆ ವ್ಯವಸ್ಥೆ

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ವಿಶೇಷ ಭೋಜನ ಪ್ರಸಾದ ವಿತರಣೆಯಾಗಿದೆ. ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪ್ರಸಾದ ಭೋಜನ ಸ್ವೀಕರಿಸಿರುವುದು ಸಂತಸ ತಂದಿದೆ. ಭೋಜನ ಪ್ರಸಾದ ಸ್ವೀಕಾರಕ್ಕೆ ಸೂಕ್ತ ವ್ಯವಸ್ಥೆಗಳನ್ನು ದೇಗುಲದಿಂದ ಮಾಡಲಾಗಿತ್ತು. ಇವುಗಳನ್ನು ಉಪಯೋಗಿಸಿ ಭಕ್ತರು ಭೋಜನ ಪ್ರಸಾದ ಸಾರಾಗವಾಗಿ ಸ್ವೀಕರಿಸಿದ್ದರು.

ಭಕ್ತರಿಗೆ ಜಾತ್ರಾ ಸಮಯದ ವಿಶೇಷ ಭೋಜನ ಪ್ರಸಾದ ಸ್ವೀಕಾರಕ್ಕೆ ಅಂಗಡಿಗುಡ್ಡೆಯಲ್ಲಿ ವಿಶೇಷ ಭೋಜನ ಛತ್ರ ನಿರ್ಮಿಸಲಾಗಿತ್ತು. ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದರೂ ಭೋಜನ ಪ್ರಸಾದ ಸ್ವೀಕರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಭೋಜನ ಪ್ರಸಾದ ಮತ್ತು ಉಪಹಾರ ವಿತರಣೆಯನ್ನು ಯೋಜನಾಬದ್ಧವಾಗಿ ನಿರ್ವಹಿಸಲು ದೇಗುಲದ ಸಿಬ್ಬಂದಿಯನ್ನು ನೇಮಿಸಲಾಗಿತ್ತು.