ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ತುಳುನಾಡಿನ ಮಣ್ಣಿನ ಮಹತ್ವ ಕಿರಿಯರಿಗೆ ಗೊತ್ತಾಗಬೇಕಾದರೆ ಇಂತಹ ಕೆಸರುಗದ್ದೆ ಕ್ರೀಡೋತ್ಸವ ನಿರಂತರ ನಡೆಯಬೇಕು ಎಂದು ಸುರಗಿರಿ ದೇವಳ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಭಂಡಾರ ಮನೆ ಹೇಳಿದರು.
ಸುರಗಿರಿ ಯುವಕ ಮತ್ತು ಯುವತಿ ಮಂಡಲ ವತಿಯಿಂದ ಅತ್ತೂರು, ಕೆಮ್ರಾಲ್, ಕಿಲೆಂಜೂರು ಗ್ರಾಮಸ್ಥರಿಗೆ ಮತ್ತು ದೇವಳದ ನಗರ ಸಂಕೀರ್ತನೆಗೆ ಒಳಪಡುವ ಗ್ರಾಮದ ಸದಸ್ಯರಿಗೆ ನಡೆದ 2ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಸದಾನಂದ ಆಸ್ರಣ್ಣ, ಶ್ರೀಶ ಭಟ್ ಆಶೀರ್ವಚನಗೈದರು. ದೇವಳದಲ್ಲಿ ವಿಶೇಷ ಪ್ರಾರ್ಥನೆಗೈದ ನಂತರ ತುಳುನಾಡ ಸಂಸ್ಕೃತಿ ಬಿಂಬಿಸುವ ದೇವರ ಬಲಿ, ಕೋಳಿ ಅಂಕ, ಭಜನೆ, ಕಂಬಳ, ಹುಲಿವೇಷದ ಮೂಲಕ ಕೆಸರು ಗದ್ದೆಗೆ ಬಂದು ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಂಬಳ ಕ್ಷೇತ್ರದಲ್ಲಿ ಹೆಸರು ಗಳಿಸಿದ ಬೋಳದಗುತ್ತು ಸತೀಶ್ ಶೆಟ್ಟಿ ಅವರ ಕಂಬಳದ ಕೋಣ ರಾಕೇಟ್ ಬೊಲ್ಲನನ್ನು ಸನ್ಮಾನಿಸಲಾಯಿತು. ಮಾನವ ಕಂಬಳ, ಹಗ್ಗಜಗ್ಗಾಟ, ಪಿರಾಮಿಡ್ ಮತ್ತಿತರರ ಕ್ರೀಡೆ ನಡೆದವು.
ಅತ್ತೂರು ಬೈಲು ವೆಂಕಟರಾಜ ಉಡುಪ, ವಿಶ್ವೇಶ್ರ ಭಟ್ ಸುರಗಿರಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಕ್ರೀಡಾ ಕಾರ್ಯದರ್ಶಿ ಸುರೇಶ್ ಶೆಟ್ಟಿ ಯೆಯ್ಯಡಿ, ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮುಖಂಡ ಮಿಥುನ್ ರೈ, ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಬೋಳದಗುತ್ತು ಸತೀಶ್ ಶೆಟ್ಟಿ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ವಸಂತ ಬೆರ್ನಾಡ್, ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಸಂತೋಷ್ ಕುಮಾರ್ ಹೆಗ್ಡೆ, ಪುರಂದರ್ ಶೆಟ್ಟಿಗಾರ್, ಅನಿಲ್ ಕುಮಾರ್ ಮೂಲ್ಕಿ, ದಿನೇಶ್ ಆಚಾರ್ಯ, ಭಾನುಮತಿ ಶೆಟ್ಟಿ ಕಕ್ವಗುತ್ತು, ಅನಿತಾ ಪೃಥ್ವಿರಾಜ್ ಆಚಾರ್ಯ, ಅಮೂಲ್ಯ ಉಮೇಶ್ ಶೆಟ್ಟಿ, ಯುವಕ ಮಂಡಲ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಸುರಗಿರಿ, ಯುವಕ ಮಂಡಲ ಮಹಿಳಾ ಮಂಡಲ ಸದಸ್ಯರು ಉಪಸ್ಥಿತರಿದ್ದರು. ಯುವಕ ಮಂಡಲ ಅಧ್ಯಕ್ಷ ಅಭಿಜಿತ್ ಶೆಟ್ಟಿ ಸ್ವಾಗತಿಸಿದರು. ಮಹಿಳಾ ಮತ್ತು ಯುವತಿ ಮಂಡಲ ಅಧ್ಯಕ್ಷೆ ಅಮಿತಾ ಶೆಟ್ಟಿ ವಂದಿಸಿದರು. ಅರ್ಪಿತಾ ಶೆಟ್ಟಿ ಸುರಗಿರಿ, ಶ್ರೀಶ ಸರ್ ಐಕಳ, ಜನಾದರ್ನ ಕಿಲೆಂಜೂರು, ಅರುಣ್ ಪಳ್ಳಿ, ನಾಗೇಶ್ ಪಳ್ಳಿ ನಿರೂಪಿಸಿದರು.