ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರವನ್ನು ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಗ್ರಾಮಾಂತರ: ಇತ್ತೀಚಿನ ದಿನಗಳಲ್ಲಿ ಒಳಮೊಗ್ರು ಗ್ರಾಮದಲ್ಲಿ ಬೀದಿನಾಯಿಗಳ ಸಂಖ್ಯೆ ಜಾಸ್ತಿಯಾಗಿದೆ. ಬೀದಿಯಲ್ಲಿ ಸುತ್ತಾಡುವ ನಾಯಿಗಳಿಗೆ ಹುಚ್ಚು ಹಿಡಿಯುವ ಸಾಧ್ಯತೆ ಅಧಿಕವಾಗಿರುವುದರಿಂದ ಈ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಹತೋಟಿಗೆ ತಾರದಿದ್ದರೆ ಅಪಾಯ ಎದುರಾಗಲಿದೆ ಎಂದು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲತ್ತಾರು ಹೇಳಿದರು.
ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖ್ಯೆ ಮತ್ತು ಕೌಡಿಚ್ಚಾರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಆಶ್ರಯದಲ್ಲಿ ಒಳಮೊಗ್ರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪಾಣಾಜೆ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಂ.ಪಿ.ಪ್ರಕಾಶ್ ಲಸಿಕೆಯ ಪ್ರಯೋಜನಗಳ ಬಗ್ಗೆ ತಿಳಿಸಿದರು.
ಕೌಡಿಚ್ಚಾರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಿರಿಯ ಪಶು ವೈದ್ಯ ಪರೀಕ್ಷಕ ಡಾ.ವೀರಪ್ಪ, ಪಂಚಾಯಿತಿ ಕಾರ್ಯದರ್ಶಿ ಜಯಂತಿ, ಪಶು ಆಸ್ಪತ್ರೆಯ ಸಿಬ್ಬಂದಿ ಪ್ರದೀಪ್, ಸರೋಜಾ, ಪಶು ಸಖಿ ಜ್ಯೋತಿ ಮತ್ತು ಸವಿತಾ ಮತ್ತಿತರರಿದ್ದರು.
ಪಿಡಿಒ ಸುರೇಶ್ ಕೆ. ಸ್ವಾಗತಿಸಿದರು. ಒಟ್ಟು 7 ಕಡೆಗಳಲ್ಲಿ ಕ್ಯಾಂಪ್ ಗ್ರಾಮದ ಪರ್ಪುಂಜ ಶಾಲಾ ಬಳಿ, ಕುಟ್ಟಿನೋಪಿನಡ್ಕ ಜಂಕ್ಷನ್, ಮುಡಾಲ ಮರಾಠಿ ಸಂಘ ದ ಸಭಾಭವನದ ಬಳಿ, ದರ್ಬೆತ್ತಡ್ಕ ಶಾಲಾ ಬಳಿ, ಅಜಲಡ್ಕ ಸಮುದಾಯ ಭವನದ ಬಳಿ, ಕೈಕಾರ ಹಾಗೂ ಅಜ್ಜಿಕಲ್ಲು ಹಾಲು ಸೊಸೈಟಿ ಬಳಿ ಸೇರಿ ಒಟ್ಟು 7 ಕಡೆಗಳಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ನಡೆಯಿತು.