ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಮಕ್ಕಳಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಂಗಳೂರು ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಉದ್ಘಾಟಿಸಿದರು. ಮೊಯ್ದಿನ್ ಕುಟ್ಟಿ, ವೆಂಕಟೇಶ್, ಕೆ.ಎನ್.ಪ್ರವೀಣ್ ಕುಮಾರ್ ಇದ್ದರು. 
ದಕ್ಷಿಣ ಕನ್ನಡ

ಉತ್ತಮ ಭಾವನೆ ಮೂಡಿಸುವ ಶಿಕ್ಷಣ PUTTUR

ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಆಶಯ | ಮಕ್ಕಳಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ

ಪುತ್ತೂರು: ಮಕ್ಕಳಲ್ಲಿ ಉತ್ತಮ ಭಾವನೆ ಹುಟ್ಟುಹಾಕುವ ಕಾರ್ಯ ಶಿಕ್ಷಕರಿಂದ ಆಗುತ್ತದೆ. ಕಾನೂನು ಸೇವಾ ಪ್ರಾಽಕಾರಕ್ಕೂ ಮಕ್ಕಳಿಗೂ ಅವಿನಾಭಾವ ಸಂಬಂಧವಿದ್ದು, ಮಕ್ಕಳ ಹಕ್ಕುಗಳನ್ನು ಶಾಲೆಗಳಲ್ಲಿ ಕಾರ್ಯಕ್ರಮದ ಮೂಲಕ ತಿಳಿಸಲಾಗುತ್ತದೆ. ಮಕ್ಕಳ ಹಕ್ಕುಗಳ ಬಗ್ಗೆ ಚಿಂತಿಸುವ ಕಾರ್ಯ ವೇದಿಕೆ ಮಾಡುತ್ತಿದೆ. ಮಕ್ಕಳ ಮಟ್ಟಕ್ಕೆ ಇಳಿದು ಪಾಠ ಮಾಡಿದಾಗ ಮಕ್ಕಳಸ್ನೇಹಿ ಶಿಕ್ಷಕರಾಗಲು ಸಾಧ್ಯ. ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಜತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಒಟ್ಟಾಗಿ ದುಡಿದಾಗ ದೇಶ ಮುಂಚೂಣಿಯಲ್ಲಿರುತ್ತದೆ ಎಂದು ಮಂಗಳೂರು ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಹೇಳಿದರು.

ಮುಕ್ವೆ ಆರ್‌ಜೆಎಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ವತಿಯಿಂದ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಎರಡನೇ ವರ್ಷದ ಮಕ್ಕಳಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಸಂಚಾಲಕ ಮೊಯ್ದಿನ್ ಕುಟ್ಟಿ ವಹಿಸಿದ್ದರು. ರಾಜ್ಯ ಹಾಗೂ ಜಿಲ್ಲಾ ನಿರ್ದೇಶಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕ ಸೈಮನ್ ಸಿ.ಎ., ಮಕ್ಕಳ ಹಕ್ಕುಗಳ ಆಯೋಗ ಸದಸ್ಯ ವೆಂಕಟೇಶ್, ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಬಿ., ಹೈಕೋರ್ಟ್ ಹಿರಿಯ ವಕೀಲ ಕೆ.ಎನ್.ಪ್ರವೀಣ್ ಕುಮಾರ್, ಮಗು ಮತ್ತು ಕಾನೂನು ಕೇಂದ್ರ ತರಬೇತಿ ಸಂಯೋಜಕ ಕುಮಾರ್ ಶೃಂಗೇರಿ, ಮಕ್ಕಳ ಕಲ್ಯಾಣ ಸಮಿತಿ ನಿಕಟಪೂರ್ವ ಅಧ್ಯಕ್ಷ ರೆನ್ನಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ನಿರ್ದೇಶಕ ಸಿರಾಜ್ ಚಿಲಿಂಬಿ ಸ್ವಾಗತಿಸಿದರು. ರಾಜ್ಯ ಕೋಶಾಽಕಾರಿ ಉಸ್ಮಾನ್ ನೆಕ್ಕಿಲು ವಂದಿಸಿದರು. ಶುಭ ರೈ, ಫಾತಿಮಾರಿದ ನಿರೂಪಿಸಿದರು.

ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ:

ಶಿಕ್ಷಕರಾದ ವೆಂಕಟೇಶ ಎನ್.ತುಳುಪುಲೆ, ವಸುಧಾ ಪಿ., ಕವಿತಾ ಕೆ., ಭವ್ಯ ಎಚ್.ಜಿ., ನಿರಂಜನ್ ಡಿ., ಸದಾಶಿವ ಶಿವಗಿರಿ ಕಲ್ಲಡ್ಕ, ನಳಿನಾಕ್ಷಿ ಬಿ., ಶುಭ ಪಿ.ಜಿ., ವಿನುತ ಎಸ್., ಭರತ್ ಕುಮಾರ್, ಸುಬ್ರಹ್ಮಣ್ಯ ಆತ್ಯಾಡಿ, ಮೇಬಲ್ ನೋರಾ ಡಿಸೋಜ, ಶ್ರೀಲತಾ ರಾಜೇಶ್ ರೈ, ಸುಜಾತಾ ಎಂ.ಕೆ., ಸುನಿತಾ ಬಿ., ಜಯಶ್ರೀ ಕೆ., ಶಿಲ್ಪ ಕೆ.ಟಿ., ದಯಾಮಣಿ ಕೆ., ವನಿತಾ, ಅಕ್ಷತಾ ಅವರಿಗೆ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿಕ್ಷಣ ಸಮಾಜವನ್ನು ಬದಲಾವಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಬೈಲ್ ಗೀಳಾಗಿ ಪರಿವರ್ತನೆಯಾಗುತ್ತಿರುವುದು ಕಳವಳಕಾರಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಧ್ವನಿಯೆತ್ತಬೇಕಾಗಿದೆ. ಶಾಲೆಯ ರಕ್ಷಣೆ ಮಾಡುವ ಜತೆಗೆ ಗುಣಾತ್ಮಕ ಶಿಕ್ಷಣ ಸಿಗುವಂತೆ ಮಾಡುವಲ್ಲಿ ಎಸ್‌ಡಿಎಂಸಿ ಗಳ ಪಾತ್ರ ದೊಡ್ಡದಿದೆ.
ವೆಂಕಟೇಶ್, ಸದಸ್ಯ, ಮಕ್ಕಳ ಹಕ್ಕುಗಳ ಆಯೋಗ