ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರ ಸಂಘದ ಪುತ್ತೂರು ಘಟಕದ ಸದಸ್ಯರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಪೂರ್ಣೇಶ್ ಬಿ.ಎಂ., ಮಾದೇಗೌಡ ಸಿ.ಆರ್., ಸುಶ್ಮಿತಾ ಇತರರು ಇದ್ದರು. 
ದಕ್ಷಿಣ ಕನ್ನಡ

ಬೇಡಿಕೆ ಈಡೇರುವವರೆಗೆ ಮುಷ್ಕರ Puttur

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • - ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ
ಪುತ್ತೂರು: ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ತನಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರ ಸಂಘದ ಪುತ್ತೂರು ಘಟಕದ ಪ್ರಮುಖರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ದ.ಕ. ಜಿಲ್ಲೆಯ ಎಲ್ಲ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸುಮಾರು ೨೫ ವರ್ಷಗಳಿಂದ ಭೂ ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರೂ ನಿಗದಿತ ಸಂಭಾವನೆ ಸಿಗುತ್ತಿಲ್ಲ ಮತ್ತು ಸೇವಾ ಭದ್ರತೆ ಯಾವುದೇ ಇಲ್ಲ. ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಉದ್ಯೋಗ ಕಾಯಂ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿಯಲ್ಲಿ ಆಗ್ರಸಿದ್ದಾರೆ.
ತಾಲೂಕು ಸಂಘದ ಅಧ್ಯಕ್ಷ ಪೂರ್ಣೇಶ್ ಬಿ.ಎಂ., ಸಂಘದ ಕಾರ್ಯದರ್ಶಿ ಮಧು ಬಿ.ಎಂ., ಜಿಲ್ಲಾ ಗೌರವ ಸಲಹೆಗಾರ ಮೋಹನ ಕೆ., ಸದಸ್ಯರಾದ ಪ್ರಜ್ವಲ್ ಎಸ್.ವಿ., ಮಾದೇಗೌಡ ಸಿ.ಆರ್., ಸುಶ್ಮಿತಾ, ಸುಜಿತ್, ಕಿರಣ್ ಕುಮಾರ್, ರಾಜೇಶ್, ರಂಜಿತ್ ಹಾಗೂ ಪ್ರಜ್ವಲ್ ರೈ ಉಪಸ್ಥಿತರಿದ್ದರು.
"

ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರೂ ನಮಗೆ ಯಾವುದೇ ಸಂಭಾವನೆ ಬಂದಿಲ್ಲ. ಇದಲ್ಲದೆ ಕಚೇರಿಯಲ್ಲಿ ಇತರ ಕೆಲಸಗಳಿಗೆ ನಿಯೋಜಿಸಿದ್ದರೂ ವೇತನ ನೀಡುತ್ತಿಲ್ಲ. ಹೀಗಾಗಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಮುಷ್ಕರ ನಡೆಸಲು ಮುಂದಾಗಿದ್ದು, ತಾಲೂಕು ಸಂಘ ಮುಷ್ಕರಕ್ಕೆ ಬೆಂಬಲ ನೀಡಲಿದೆ. ರೈತರಿಗೆ ತೊಂದರೆ ಆಗದಂತೆ ನಮ್ಮಲ್ಲಿರುವ ಕಡತಗಳನ್ನು ಕಚೇರಿಗೆ ಹಿಂತಿರುಗಿಸಲಿದ್ದೇವೆ.