ಪುತ್ತೂರು ಸಾಹಿತ್ಯೋತ್ಸವ ೨೦೨೬ ಕಾರ್ಯಕ್ರಮವನ್ನು ಸಾಹಿತ್ಯ ಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಉದ್ಘಾಟಿಸಿದರು. ಅಶೋಕ್ ಕುಮಾರ್ ರೈ, ಸಾಯೀಶ್ವರಿ, ಡಾ.ಎಂ.ಪಿ.ಶ್ರೀನಾಥ್ ಇದ್ದರು. 
ದಕ್ಷಿಣ ಕನ್ನಡ

ಯುವಜನರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವುದು ಸವಾಲು PUTTUR

ಶಾಸಕ ಅಶೋಕ್ ಕುಮಾರ್ ರೈ ಬೇಸರ | ತೆಂಕಿಲ ಶಾಲೆಯಲ್ಲಿ ಪುತ್ತೂರು ಸಾಹಿತ್ಯೋತ್ಸವ

ಪುತ್ತೂರು: ಸಾಹಿತ್ಯದ ಬಗ್ಗೆ ಯುವ ಶಕ್ತಿಯಲ್ಲಿ ಆಸಕ್ತಿ ಮೂಡಿಸುವುದು ಸವಾಲಿನ ಕೆಲಸ. ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಸೃಷ್ಟಿಸಿರುವುದು ಉತ್ತಮ ವಿಚಾರ. ಎಲ್ಲರಂಗದಲ್ಲಿ ಅಭಿವೃದ್ಧಿಯಾದಾಗ ಸಮಾಜ ಮುನ್ನಡೆಯಲು ಸಾಧ್ಯ. ಬಾಲವನದಲ್ಲಿ ಸಾಹಿತ್ಯಕ್ಕೆ ಬೇಕಾದ ವಾತಾವರಣ ಸೃಷ್ಟಿಸಬೇಕಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ತೆಂಕಿಲ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕ, ಕ್ಷೇತ್ರ ಶಿಕ್ಷಣಾಽಕಾರಿ ಕಚೇರಿ, ಚಿಗುರೆಲೆ ಸಾಹಿತ್ಯ ಬಳಗದ ವತಿಯಿಂದ ನಡೆದ ಪುತ್ತೂರು ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಸ್ಪಂದನ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ ಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಉದ್ಘಾಟಿಸಿದರು. ಕನ್ನಡ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಸಾಯೀಶ್ವರಿ ಸರ್ವಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಪುರಸ್ಕರಿಸಲಾಯಿತು. ಕವಿ, ಕಥಾ, ಪ್ರವಾಸ ಕಥನ ಸೇರಿ ವಿವಿಧ ಗೋಷ್ಠಿಗಳು ನಡೆದವು.

ಬೆಂಗಳೂರಿನ ದರ್ಶನ್ ಗರ್ತಿಕೆರೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ಅಽಕ್ಷಕ ಅನಿಲ್ ಕುಮಾರ್ ಭೂಮ ರೆಡ್ಡಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಶಿಕಲಾ, ದೇವಕಿ, ಪ್ರಸಾದ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಽಕಾರಿ ಬಿ.ಐತಪ್ಪ ನಾಯ್ಕ್, ಪ್ರಮುಖರಾದ ರಮೇಶ್‌ಚಂದ್ರ, ಚಂದ್ರಮೌಳಿ ಕದಂಬೇಲು ಉಪಸ್ಥಿತರಿದ್ದರು.

ಡಾ.ಹರ್ಷ ಕುಮಾರ್ ರೈ ಸ್ವಾಗತಿಸಿದರು. ನಾರಾಯಣ ಕುಂಬ್ರ ಪ್ರಸ್ತಾವನೆಗೈದರು. ಆಶಾ ಬೆಳ್ಳಾರೆ ವಂದಿಸಿದರು. ಗಣೇಶ್ ಕಲ್ಲರ್ಪೆ, ಶ್ರೇಯಾ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು.

ಇಬ್ಬರ ಕೃತಿಗೆ ಪಟ್ಟಿ!

ಕನ್ನಡ ಸಾಹಿತ್ಯ ಲೋಕಕ್ಕೆ ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ತಂದ ಕವಿಗಳ ಕೃತಿ, ಹೆಸರು ಸಹಿತ ಭಾವಚಿತ್ರವನ್ನು ಸಭಾಂಗಣದಲ್ಲಿ ಅಳವಡಿಸಲಾಗಿತ್ತು. ಇದರಲ್ಲಿ ಮಾಸ್ತಿ ಹಾಗೂ ಬೇಂದ್ರೆ ಅವರ ಕೃತಿಗಳ ಹೆಸರು ತಪ್ಪಿದ್ದು ಪಟ್ಟಿ ಅಂಟಿಸುವ ಕೂಲಕ ತಪ್ಪನ್ನು ಮುಚ್ಚಿಡಲಾಗಿತ್ತು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಿ ಸಂಗ್ರಹ

ಸಾಹಿತೋತ್ಸವ ಕಾರ್ಯಕ್ರಮದಲ್ಲಿ ಪುತ್ತೂರಿಗೆ ಕಿಮ್ಸ್, ನಿಮ್ಹಾನ್ಸ್, ಜಯದೇವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಘಟಕ ಸ್ಥಾಪಿಸಬೇಕೆಂಬ ಹಕ್ಕೋತ್ತಾಯದ ಸಹಿ ಸಂಗ್ರಹ ಕಾರ್ಯ ನಡೆಯಿತು. ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ ಸಹಿ ಅಭಿಯಾನದ ನೇತೃತ್ವ ವಹಿಸಿದ್ದರು.