ದಕ್ಷಿಣ ಕನ್ನಡ

ಇಂದು ಈಶ್ವರಮಂಗಲ ಗ್ರಾಪಂ ಮುಂಭಾಗ ಪ್ರತಿಭಟನೆ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲದಲ್ಲಿ ಕಾರ್ಯಾಚರಿಸುತ್ತಿರುವ ದುರ್ವಾಸನೆಯುಕ್ತ ಅನಧಿಕೃತ ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ತಕ್ಷಣ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಪಂಚಾಯಿತಿ ಪಿಡಿಒ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ವಿರೋಽಸಿ ನ.೧೭ರಂದು ಮಧ್ಯಾಹ್ನ ೨ ಗಂಟೆಗೆ ಈಶ್ವರಮಂಗಲ ಗ್ರಾಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜಾಗೃತ ಹಿಂದೂ ಜಾಗರಣ ಈಶ್ವರಮಂಗಲ, ಎಸ್‌ಕೆಎಸ್‌ಎಸ್‌ಎಫ್ ಮೇನಾಲ ಘಟಕ, ಎಸ್‌ಎಸ್‌ಎಫ್ ಮೇನಾಲ ಘಟಕ, ಸರ್ವಪಕ್ಷ ಪದಾಽಕಾರಿಗಳು ಹಾಗೂ ಕಾರ್ಯಕರ್ತರು ಮತ್ತು ಮೇನಾಲ-ಈಶ್ವರಮಂಗಲ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.