ನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಮಾತನಾಡಿದರು. ಉಪ ನಿರೀಕ್ಷಕರಾದ ಸೇಸಮ್ಮ, ಸುಹಾಸ್ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಹಬ್ಬ ಆಚರಣೆ PUTTUR

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಸೂಚನೆ
ಪುತ್ತೂರು: ನಗರ ವ್ಯಾಪ್ತಿಯಲ್ಲಿ ೩೩ ಮಸೀದಿಗಳಿದ್ದು, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಮರವಣಿಗೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರೆ ಅಗತ್ಯ ಬಂದೋಬಸ್ತು ಕಲ್ಪಿಸಬಹುದು ಎಂದು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಶಾಂತಿಸಭೆಯಲ್ಲಿ ಮಾತನಾಡಿ, ಸ್ವಯಂ ಸೇವಕರನ್ನು ನೇಮಿಸಿ ಮೆರವಣಿಗೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮೆರವಣಿಗೆಯಲ್ಲಿ ಬೈಕ್ ರ್‍ಯಾಲಿಗೆ ಅನುಮತಿ ಇಲ್ಲ. ರಾತ್ರಿ ೧೦ ಗಂಟೆ ಮೊದಲು ಎಲ್ಲ ಕಾರ್ಯಕ್ರಮ ಮುಗಿಯುವಂತೆ ನೋಡಿಕೊಳ್ಳಬೇಕು ಎಂದರು.
ಆ.೨೫ರಂದು ಸಂಜೆ ದರ್ಬೆಯಿಂದ ಕಿಲ್ಲೆ ಮೈದಾನದ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಏಕಮುಖ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಗಾಂಧಿಕಟ್ಟೆಯ ಸಮೀಪ ಮೆರವಣಿಗೆ ತಲುಪುವಾಗ ದಟ್ಟಣೆಯಾಗಿ ಸಮಸ್ಯೆಯಾಗುತ್ತದೆ. ಕಬಕದಿಂದ ಮಜಳಪಡ್ಪುವರೆಗೆ ೫೦ರಿಂದ ೬೦ ಅಲಂಕೃತ ವಾಹನಗಳ ಪ್ರದರ್ಶನ ನಡೆಯುತ್ತದೆ. ಬಳಿಕ ಕಬಕದಲ್ಲಿ ಸಮಾರಂಭ ನಡೆಯಲಿದೆ ಎಂದು ಸಮುದಾಯ ಪ್ರಮುಖರು ಮಾಹಿತಿ ನೀಡಿದರು.
ಉಪ ನಿರೀಕ್ಷಕರಾದ ಸೇಸಮ್ಮ, ಸುಹಾಸ್ ಉಪಸ್ಥಿತರಿದ್ದರು.