ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ಪುತ್ತೂರು ಸೈನಿಕ ಭವನದಲ್ಲಿ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಿಸಲಾಾುತು. ಸತ್ಯಜಿತ್‌ ಸುರತ್ಕಲ್‌, ಶ್ರೀಕಾಂತ್‌ ಶೆಟ್ಟಿ, ವಸಂತ ಗೌಡ ಇತರರು ಇದ್ದರು. 
ದಕ್ಷಿಣ ಕನ್ನಡ

ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಸತ್ಯಜಿತ್‌ ಸುರತ್ಕಲ್‌ ಹೇಳಿಕೆ
  • ಸೈನಿಕ ಕಲ್ಯಾಣ ನಿಧಿ ವಿತರಣೆ
ಪುತ್ತೂರು: ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜವನ್ನು ರಕ್ಷಿಸುವ ಸೈನಿಕರನ್ನು ಗುರುತಿಸಲಾಗುತ್ತಿದೆ. ಈ ವರ್ಷ 23 ಸೈನಿಕ ಕುಟುಂಬಗಳಿಗೆ 6.90 ಲಕ್ಷ ರೂ. ನೆರವು ವಿತರಿಸಲು ಸಾಧ್ಯವಾಗಿದೆ. ಮೊತ್ತ ಸಣ್ಣದಾಗಿದ್ದರೂ, ಅದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನವಾಗಿದೆ ಎಂದು ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌ ಹೇಳಿದರು.
ಸುರತ್ಕಲ್‌ ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್‌ ವತಿಾುಂದ ಪುತ್ತೂರು ಮಾಜಿ ಸೈನಿಕರ ಸಂಘದ ಸಹಾೂಗದೊಂದಿಗೆ ಕಾರ್ಗಿಲ್‌ ವಿಜಯ್‌ ದಿವಸ್‌ ಆಚರಣೆಯ ಪ್ರಯುಕ್ತ ಪುತ್ತೂರು ಸೈನಿಕ ಭವನದಲ್ಲಿ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಚಂದ್ರಶೇಖರ್‌ ದೇಲಂಪಾಡಿ, ವಿಶ್ವನಾಥ ಪೂಜಾರಿ, ಶಿವಪ್ಪ ಗೌಡ ಪೋಳ್ಯ, ಸುಂದರ ಪೂಜಾರಿ ನಿಡ್ಪಳ್ಳಿ, ಅಶೋಕ್‌, ವಿಜಯ್‌ ಅವರನ್ನು ಗೌರವಿಸಲಾಾುತು.
ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಕಾಂತ್‌ ಶೆಟ್ಟಿ, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಯಶ್‌ಪಾಲ್‌ ಸುವರ್ಣ, ಹರೀಶ್‌, ಪುತ್ತೂರು ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ತುಳಸಿದಾಸ್‌ ಪಿಲಿಂಜ, ಕಾರ್ಯದರ್ಶಿ ಪುರಂದರ, ಭಾಸ್ಕರ್‌ ನಾಯ್ಕ್‌, ಶಿವಪ್ಪ ಗೌಡ, ಶ್ರೀರಂಗ ಶಾಸ್ತ್ರಿ, ಚಂಚಲಾಕ್ಷ, ಉದಯ ಕುಮಾರ್‌, ಜನಾರ್ದನ ಪಡುಮಲೆ, ಧನು ಪಟ್ಲ, ಗಿರೀಶ್‌ ಪಡ್ಡಾಯೂರು, ಉದ್ಯಮಿ ಉಜ್ವಲ್‌ ಪ್ರಭು, ಸಂತೋಷ್‌ ರೈ ಕೈಕಾರ ಉಪಸ್ಥಿತರಿದ್ದರು.
ವಸಂತ ಗೌಡ ಸ್ವಾಗತಿಸಿದರು. ಸಾರ್ಜಂಟ್‌ ರಮಾನಾಥ ರೈ ವಂದಿಸಿದರು. ಸುಂದರ ಗೌಡ ನಡುಬೈಲು ನಿರೂಪಿಸಿದರು.