ದಕ್ಷಿಣ ಕನ್ನಡ

೧೨೦ ಎಕರೆ ಜಮೀನು ಕಾಯ್ದಿರಿಸಲು ಡಿಸಿಗೆ ಮನವಿ PUTTUR

ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆ

ಪುತ್ತೂರು: ಸೇಡಿಯಾಪುವಿನಲ್ಲಿ ಜಯದೇವ, ಕಿದ್ವಾಯಿ ಮತ್ತು ನಿಮ್ಹಾನ್ಸ್ ಘಟಕಗಳು ಹಾಗೂ ಭವಿಷ್ಯದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಸ್ಥಾಪನೆಗಾಗಿ ಗುರುತಿಸಿರುವ ೧೨೦ ಎಕರೆ ಜಮೀನನ್ನು ಕಾಯ್ದಿರಿಸುವಂತೆ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಲಾಯಿತು.

ಭವಿಷ್ಯದ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಅಭಿವೃದ್ಧಿಗಾಗಿ ಅಗತ್ಯ ಜಮೀನು ಕಾಯ್ದಿರಿಸಬೇಕು. ಈ ಸಂಸ್ಥೆಗಳ ಘಟಕಗಳು ಪುತ್ತೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಮೀಪದಲ್ಲಿ ಸ್ಥಾಪನೆಯಾದರೆ ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅನುಕೂಲವಾಗುತ್ತದೆ. ಸಮಗ್ರ ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಆವರಣವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಸಂಕೀರ್ಣ ಕಾಯಿಲೆಗಳಿರುವ ರೋಗಿಗಳಿಗೆ ಹಲವು ವಿಭಾಗಗಳ ತಜ್ಞರ ಸಹಯೋಗ ಅಗತ್ಯವಾಗಿದ್ದು, ಒಂದೇ ಆವರಣದಲ್ಲಿ ಅಥವಾ ಸಮೀಪದಲ್ಲಿದ್ದಾಗ ಸಕಾಲದಲ್ಲಿ ತಜ್ಞರ ಸಮಾಲೋಚನೆ, ಸಂಯೋಜಿತ ಪರೀಕ್ಷೆಗಳು, ಬಹುವಿಭಾಗೀಯ ಚಿಕಿತ್ಸೆ ಮತ್ತು ನಿರಂತರ ಆರೈಕೆಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಮೆರಿಕ ತಜ್ಞ ವೈದ್ಯ ಡಾ.ಸಂದೀಪ್ ನಾಯಕ್ ಸಾಮೆತ್ತಡ್ಕ, ಹೋರಾಟ ಸಮಿತಿ ಸಂಚಾಲಕ ಅಮಳ ರಾಮಚಂದ್ರ ಉಪಸ್ಥಿತರಿದ್ದರು.