ಪುತ್ತೂರು: ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ೨೦೨೭ರ ಶೈಕ್ಷಣಿಕ ವರ್ಷದಲ್ಲಿ ೫೦ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ಲ್ಯಾನ್ ಬಿ ವೇಗ ಪಡೆದುಕೊಂಡಿದ್ದು, ಬೆಂಗಳೂರು ರಾಜೀವ್ ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯ ಆದೇಶದಂತೆ ತಪಾಸಣಾ ಸಮಿತಿಯ ಮೂರು ಮಂದಿ ತಜ್ಞರ ತಂಡ ಶನಿವಾರ ಪುತ್ತೂರಿಗೆ ಆಗಮಿಸಿ ಕಾಮಗಾರಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿತು.
ತಂಡದ ಅಧ್ಯಕ್ಷ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ.ಸುರೇಶ್ ಎಸ್.ಕನಕಣ್ಣವರ್, ಸದಸ್ಯರಾದ ಶಿವಮೊಗ್ಗ ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಮಿಥುನ್ ಕೆ.ಎಂ., ಶಿವಮೊಗ್ಗ ಎಸ್ಐಎಂಎಸ್ನ ಡಾ.ರಮೇಶ್ ಬಾಬು ಅವರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದರು. ತಪಾಸಣೆಯ ಸಂಪೂರ್ಣ ವರದಿಯನ್ನು ೨೪ ಗಂಟೆಗಳ ಒಳಗೆ ಕುಲಸಚಿವರಿಗೆ ಸಲ್ಲಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯ ಆದೇಶದಲ್ಲಿ ಸೂಚಿಸಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಲೋಹಿತ್ ಕುಮಾರ್, ಡಾ.ಶಶಾಂಕ್, ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರದೀಪ್, ರಂಜಿತ್ ಮತ್ತಿತರರು ಹಾಜರಿದ್ದರು.
ವಿವಿಧ ವಿಭಾಗಗಳಿಗೆ ಕೊಠಡಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಬೇಕಾದ ೬ ಮೃತದೇಹಗಳನ್ನು ಶಿವಮೊಗ್ಗ, ಹಾಸನ, ಮಡಿಕೇರಿ ಮೆಡಿಕಲ್ ಕಾಲೇಜಿನಿಂದ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಯಂತ್ರೋಪಕರಣ, ಪರಿಕರಗಳು ಪುತ್ತೂರಿಗೆ ಆಗಮಿಸುತ್ತಿದ್ದು, ಇವುಗಳನ್ನು ಜೋಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮಾನವ ದೇಹದ ವಿವಿಧ ಅಂಗಾಂಗಳು ಪುತ್ತೂರಿಗೆ ಆಗಮಿಸಿದ್ದು, ಅವುಗಳನ್ನು ಸಂರಕ್ಷಿಸಿಡಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಆಸನದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
///ಕೋಟ್ಸ್//
/////
/////
ಚಿತ್ರ ಇದೆ:
ಪಿಟಿಆರ್*೨೧ ನವ್*೧ :
ಪಿಟಿಆರ್*೨೧ ನವ್*೨ :
ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ವಿವಿಧ ಅಂಗಾಂಗಳನ್ನು ಸಂರಕ್ಷಿಸಿಟ್ಟಿರುವುದು.
ಪಿಟಿಆರ್*೨೧ ನವ್*೩ :
ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ವಿವಿಧ ವೈದ್ಯಕೀಯ ಪರಿಕರಗಳನ್ನು ತಂದಿರುವುದು.
ವೈದ್ಯಕೀಯ ಉಪಕರಣಗಳು ಬಂದಿದ್ದು, ಇನ್ನಷ್ಟು ಬರುವ ಹಂತದಲ್ಲಿವೆ. ಆಸ್ಪತ್ರೆಯಲ್ಲಿ ಹಾಸಿಗೆ ಹೆಚ್ಚಿಸುವ ನಿಟ್ಟಿನಲ್ಲಿಯೂ ಕೆಲಸ ನಡೆಯುತ್ತಿದೆ. ೯೨ ವೈದ್ಯರು, ೧೭೫ ಸಿಬ್ಬಂದಿ, ೮೦ ನರ್ಸಿಂಗ್ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ. ಹಾಸ್ಟೆಲ್ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ೭ ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣವಾಗಲಿದೆ. ಸೇಡಿಯಾಪು ನಿವೇಶನದಲ್ಲಿ ಕಟ್ಟಡಗಳು ಸಿದ್ಧವಾಗುತ್ತಿದ್ದಂತೆ ಎಲ್ಲವೂ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ. ಇದರಿಂದ ವಿಟ್ಲ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.ಅಶೋಕ್ ಕುಮಾರ್ ರೈ, ಶಾಸಕ
ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕೆಂಬ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸಾಕಷ್ಟು ಹೋರಾಟ ಮಾಡಿದ್ದು, ಅದರ ಪ್ರತಿಫಲವಾಗಿ ಇಂದು ಪರಿಶೀಲನಾ ಕಾರ್ಯ ನಡೆಯುತ್ತಿದೆ. ಬೋಧನೆಗೆ ಬೇಕಾದ ವ್ಯವಸ್ಥೆ, ಆಸ್ಪತ್ರೆಯ ಸೌಕರ್ಯ, ವಸತಿ ಸೌಕರ್ಯ, ಬೋಧಕೇತರ ಸಿಬ್ಬಂದಿ ವಸತಿ ಸೌಲಭ್ಯ ಸೇರಿ ಸೌಲಭ್ಯ ಕಲ್ಪಿಸಲು ಬೇಕಾದ ಜಾಗ ಇದೆಯಾ ಎಂಬುದನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುವುದು. ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ಸೆಪ್ಟೆಂಬರ್ನಲ್ಲಿ ದಾಖಲಾತಿ ಪ್ರಾರಂಭವಾಗಬಹುದು. ಸೋಮವಾರ ಸಿಂಡಿಕೇಟ್ ಮೀಟಿಂಗ್ ನಿಗದಿಯಾಗಿದ್ದು, ಅನುಮೋದನೆಗೆ ಸಂಬಂಧಿಸಿದಂತೆ ಇಂಟರ್ನಲ್ ಕಮಿಟಿ ಇದೆ.ಡಾ.ಸುರೇಶ್ ಎಸ್.ಕನಕಣ್ಣವರ್, ತಪಾಸಣಾ ತಂಡದ ಅಧ್ಯಕ್ಷ
ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆ ನಿಟ್ಟಿನಲ್ಲಿ ರಾಜೀವ್ ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಅ.೮ರಂದು ಅರ್ಜಿ ಸಲ್ಲಿಸಲಾಗಿದೆ. ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಸಮಿತಿ ನೀಡುವ ವರದಿ ವಿವಿ ಸಿಂಡಿಕೇಟ್ ಸಭೆಯ ಮುಂದೆ ಬರಲಿದೆ. ಅಲ್ಲಿ ಸಮ್ಮತಿ ಪತ್ರ ಸಿಕ್ಕ ಬಳಿಕ ಕೇಂದ್ರ ಸರ್ಕಾರಕ್ಕೆ ಅನುಮತಿ ಸಲ್ಲಿಸಲಿದ್ದೇವೆ. ಕೇಂದ್ರ ಸರ್ಕಾರಕ್ಕೆ ನ.೩೦ರೊಳಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಬಳಿಕ ಫಾರ್ಮ್ ಬಿನಲ್ಲಿ ಸಿಬ್ಬಂದಿ, ಕ್ಲಿನಿಕಲ್ ಮೆಟೀರಿಯಲ್ ಅನ್ನು ಹಂತಹಂತವಾಗಿ ಭರ್ತಿ ಮಾಡಬೇಕು. ಸುಮಾರು ೬೩ ದಾಖಲೆಗಳನ್ನು ಡಿ.೩೦ರ ಒಳಗಡೆ ನೀಡಬೇಕಾಗಿದೆ. ಜನವರಿ ಮೊದಲ ವಾರದಿಂದ ಕೇಂದ್ರದ ಪರೀಕ್ಷಾ ತಂಡ ಆಗಮಿಸಲಿದೆ.ಡಾ.ಲೋಹಿತ್ ಕುಮಾರ್, ವಿಶೇಷ ಅಧಿಕಾರಿ, ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ