ಪುತ್ತೂರು ಶಾಸಕರ ವರ್ತನೆಯನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರತಿಭಟನೆ ನಡೆಯಿತು.
- ಸುಲೋಚನಾ ಭಟ್ ಆಗ್ರಹ
- ಪುತ್ತೂರು ಶಾಸಕರ ವರ್ತನೆ ಖಂಡಿಸಿ ಪ್ರತಿಭಟನೆ
ಪುತ್ತೂರು: ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವುದನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಮಹಿಳಾ ಅಧಿಕಾರಿಗಳನ್ನು ತುಚ್ಛವಾಗಿ ಕಾಣುವ ಶಾಸಕರ ಕ್ರಮ ಖಂಡನೀಯ. ಅತ್ಯಂತ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವ ಮಹಿಳಾ ಅಽಕಾರಿಗಳನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ. ತಪ್ಪು ಮಾಡದ ಪ್ರಾಂಶುಪಾಲೆಯ ಪರ ಯಾವ ಹಂತದ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಬಿಜೆಪಿ ನಾಯಕಿ ಸುಲೋಚನಾ ಭಟ್ ಹೇಳಿದರು.
ಪುತ್ತೂರು ಮಿನಿ ವಿಧಾನಸೌಧ ಮುಂಭಾಗ ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ, ಮಹಿಳಾ ಅಧಿಕಾರಿಗಳನ್ನು ಪ್ರಭಾವ ಬಳಸಿ ವರ್ಗಾವಣೆ, ಅಮಾನತು ಮಾಡುವ ಮೂಲಕ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಪುತ್ತೂರು ಶಾಸಕರ ವರ್ತನೆಯನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಮಹಿಳಾ ಮೋರ್ಚಾದ ಮಂಜುಳಾ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪ್ರಮುಖರಾದ ಕಸ್ತೂರಿ ಪಂಜ, ಯಶೋದಾ ಕೆ.ಗೌಡ, ಲೀಲಾವತಿ ಅಣ್ಣು ನಾಯ್ಕ, ಆಶಾ ತಿಮ್ಮಪ್ಪ ಗೌಡ, ಸ್ವರ್ಣಲತಾ ಹೆಗ್ಡೆ, ವಿದ್ಯಾಗೌರಿ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಉಪಸ್ಥಿತರಿದ್ದರು.