ಕೋಟಿ ಚೆನ್ನಯ ಜೋಡುಕರೆ ಕಂಬಳವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಉದ್ಘಾಟಿಸಿದರು. ಪ್ರಮುಖರಾದ ಶಕುಂತಳಾ ಟಿ.ಶೆಟ್ಟಿ, ವಿದ್ಯಾ ಕಾಳೆ, ಪದ್ಮನಾಭ ಶೆಟ್ಟಿ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಕಂಬಳ ವಿರೋಧಿಸಿದವರು ಮೂಲೆಗುಂಪು Puttur Temple

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಈಶ್ವರ ಭಟ್ ಪಂಜಿಗುಡ್ಡೆ ಹೇಳಿಕೆ
  • ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟನೆ
ಪುತ್ತೂರು: ಕಂಬಳಕ್ಕೆ ಮೆರುಗು ನೀಡಿದ ಪುತ್ತೂರು ಹಲವು ಪ್ರಥಮಗಳಿಗೆ ಕಾರಣವಾಗಿ ರಾಜ್ಯದಲ್ಲೇ ಮೇಲುಗೈ ಸಾಽಸಿದೆ. ಕಾರ್ಯಕರ್ತರ ಶ್ರಮದ -ಲವಾಗಿ ಪುತ್ತೂರು ಕಂಬಳ ಹೆಸರು ಗಳಿಸುವಂತಾಗಿದೆ. ಈ ಕಂಬಳಕ್ಕೆ ವಿರೋಧ ಮಾಡಿದವರು ಮೂಲೆಗುಂಪಾಗಿದ್ದಾರೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.
ದೇವರಮಾರು ಗದ್ದೆಯಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು.
ಕಂಬಳ ಪ್ರಾರಂಭಕ್ಕೂ ಮುನ್ನ ಗಣಪತಿ ಹವನ, ಮೂಲ ನಾಗ ಸಾನ್ನಿಧ್ಯದಲ್ಲಿ ತಂಬಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪೌರಾಯುಕ್ತ ವಿದ್ಯಾ ಕಾಳೆ, ಪ್ರಮುಖರಾದ ಪದ್ಮನಾಭ ಶೆಟ್ಟಿ, ಡಾ.ಶರತ್ ಶೆಟ್ಟಿ, ದಿವ್ಯಾ ಶೆಟ್ಟಿ, ಬಾಬು ಶೆಟ್ಟಿ, ಜಯಂತ ನಡುಬೈಲು, ದಿವಾಕರ ರೈ, ಮೌರೀಸ್ ಮಸ್ಕರೇನಿಯಸ್, ವಲೇರಿಯನ್ ಡಯಾಸ್, ಅಬ್ದುರ್ ರಹಿಮಾನ್ ಆಝಾದ್, ಈಸೂಬ್ ಕೂರ್ನಡ್ಕ, ಸುಂದರ ಗೌಡ ಮತ್ತಿತರರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು. ದಯಾನಂದ ರೈ ಕೊಮ್ಮಂಡ ವಂದಿಸಿದರು.