ಪುತ್ತೂರಿನಲ್ಲಿ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ದಾಮೋದರದಾಸ್ ಮೋದಿ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಸಂಘದ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ, ಮುಂಬೈ ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ಅಖಿಲ ಕರ್ನಾಟಕ ಗಾಣಿಗ ಸಂಘದ ಎಂ.ಆರ್.ರಾಜಶೇಖರ್ ಗಾಣಿಗ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್‌ದಾಸ್ ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ಸಮಾಜ ಸಂಘಟನೆ ಅನಿವಾರ್ಯ Puttur

ಪ್ರಮುಖ ಮುಖ್ಯಾಂಶಗಳು

  • ಪ್ರಹ್ಲಾದ್ ದಾಮೋದರದಾಸ್ ಮೋದಿ ಹೇಳಿಕೆ
  • ಪುತ್ತೂರಿನಲ್ಲಿ ಗಾಣಿಗ ಸಂಗಮ
ಪುತ್ತೂರು: ಗಾಣಿಗ ಸಮಾಜದ ಮಗನೊಬ್ಬ ಇಡೀ ವಿಶ್ವದಲ್ಲಿ ಸಮಾಜದ ಹೆಸರನ್ನು ಬೆಳಗಿಸಿದ್ದಾನೆ. ಯಾರೇ ಎಲ್ಲೇ ಹೋಗಿ ನಾನು ಮೋದಿ ಎಂದರೆ, ಅವರ ಮಾತು ಕೇಳಲು ಜನಸಿದ್ಧರಾಗುತ್ತಾರೆ. ಇದು ಗಾಣಿಗ ಸಮಾಜದ ತಾಕತ್ತು. ದೇಶದಲ್ಲಿ ಗಾಣಿಗ ಸಮಾಜದವರು ಸುಮಾರು ೧೪ ಕೋಟಿ ಇದ್ದು, ಎಲ್ಲರೂ ಸಂಘಟಿತರಾಗುವ ಅನಿವಾರ್ಯತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಹೇಳಿದರು.
ಪುತ್ತೂರಿನಲ್ಲಿ ಗಾಣಿಗ ಯಾನೆ ಸಪಲಿಗರ ಸಂಘ ಪುತ್ತೂರು ಆಶ್ರಯದಲ್ಲಿ ಭಾನುವಾರ ನಡೆದ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಸಮುದಾಯದವರ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಬೊಲ್ಪು ಯೋಜನೆ ಮೂಲಕ ಯುವಕರ ಹೊಸ ಆಲೋಚನೆಗೆ ಅವಕಾಶ ಕಲ್ಪಿಸಲಾಗಿದೆ. ವಿಕಸಿತ ಭಾರತದ ಸಂಕಲ್ಪ ಈಡೇರಲು ಪ್ರತಿಯೊಬ್ಬರ ಬೆಂಬಲ ಅಗತ್ಯ ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮುಂಬೈ ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು. ಸಂಘದ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಕರ್ನಾಟಕ ಗಾಣಿಗ ಸಂಘದ ಎಂ.ಆರ್.ರಾಜಶೇಖರ್ ಗಾಣಿಗ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್‌ದಾಸ್, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಉದ್ಯಮಿಗಳಾದ ವಸಂತ್ ಜಿ.ಸಪಲ್ಯ, ಮಾಧವ ಮಾವೆ, ಭುವನೇಶ್ ರಘು ಸಪಲ್ಯ, ಉಪ್ಪಿನಂಗಡಿ ಗಾಣಿಗ ಸಂಘದ ಅಧ್ಯಕ್ಷ ಹರಿರಾಮಚಂದ್ರ ಮತ್ತಿತರರು ಭಾಗವಹಿಸಿದರು.
ಜಯಂತ್ ಉರ್ಲಾಂಡಿ ಸ್ವಾಗತಿಸಿದರು. ದೀಪಕ್ ಅಡ್ಯಾರ್ ವಂದಿಸಿದರು. ಸಂಘದ ಪದಗ್ರಹಣ ನಡೆಯಿತು. ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.
"

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ, ಮನೆ, ವಿದ್ಯುತ್ ಇಲ್ಲದವರು ಇರಬಾರದೆಂಬ ಕಲ್ಪನೆಯಲ್ಲಿ ಕೆಲಸ ಮಾಡಲಾಗುತ್ತಿದೆ. ಬನ್ನೂರಿನಲ್ಲಿ ಹಲವು ಜಾಗವನ್ನು ಸರ್ಕಾರಿ ಉದ್ದೇಶಕ್ಕೆ ಇಟ್ಟಿದ್ದು, ಸರ್ಕಾರಿ ಜಾಗ ಬೇಕಿದ್ದಲ್ಲಿ ಮುಖ್ಯಮಂತ್ರಿಗಳಿಂದ ಸಂಘಟನೆಗೆ ಅನುಮೋದನೆ ಕೊಡಿಸಲಾಗುವುದು.