ಪುತ್ತೂರು: ದರ್ಬೆ ಜನಸೇವಾ ಕೇಂದ್ರದಲ್ಲಿ ದಾಖಲೆ ಪತ್ರಕ್ಕೆ ಹಾನಿಯಾದ ವಿಚಾರದಲ್ಲಿ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ, ಪರಸ್ಪರ ಹಲ್ಲೆ ಘಟನೆಗೆ ಸಂಬಂಽಸಿ ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಅವಮಾನ ಮಾಡಿ ಶಾಂತಿ ಭಂಗ, ಕೊಲೆ ಯತ್ನ, ಧಮ್ಕಿ, ಮಹಿಳೆಗೆ ಅವಮಾನ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ೩ ಪ್ರಕರಣ ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ(೩೨) ದೂರುದಾರೆಯಾಗಿದ್ದು, ಕೆಲವು ದಾಖಲಾತಿಗಳನ್ನು ಪ್ರಿಂಟ್ ತೆಗೆಸಲು ಹಾಗೂ ಲ್ಯಾಮಿನೇಷನ್ ಮಾಡಿಸಲು ದರ್ಬೆ ಜನಸೇವಾ ಕೇಂದ್ರಕ್ಕೆ ಬಂದು, ವಾಪಸ್ ಪಡೆಯುವಾಗ ಒಂದು ದಾಖಲೆ ಪತ್ರಕ್ಕೆ ಹಾನಿಯಾಗಿತ್ತು. ಇದನ್ನು ಸರಿಪಡಿಸಿ ಕೊಡಿ ಅಥವಾ ಹೊಸ ದಾಖಲಾತಿ ಪಡೆಯಲು ೩೦೦ ರೂ. ನೀಡುವಂತೆ ಕೇಳಿದಾಗ ಕೇಂದ್ರದಲ್ಲಿದ್ದ ಅಂಜನಾ ಪೈ, ಸುದರ್ಶನ್ ಪೈ ಅವ್ಯಾಚವಾಗಿ ಬೈದಿದ್ದು, ಸುದರ್ಶನ ಪೈ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ದೂರಿನಲ್ಲಿ ತಿಳಿಸಿದ್ದಾರೆ.
ಮೂವರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಸುದರ್ಶನ ಪೈ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಪುತ್ತೂರು ನಿವಾಸಿ ಸುದರ್ಶನ ಪೈ (೨೯) ವಿರುದ್ಧ ೨೦೨೧ರಲ್ಲಿ ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ ಹಾಗೂ ೨೦೨೫ರಲ್ಲಿ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.
ಎರಡನೇ ಪ್ರಕರಣ: ಪುತ್ತೂರು ಕಸಬಾ ನಿವಾಸಿ ಅಂಜನಾ ಎಸ್.ಪೈ (೫೦) ದೂರುದಾರೆಯಾಗಿದ್ದು, ಜನಸೇವಾ ಕೇಂದ್ರದಲ್ಲಿ ಮಹಿಳೆ ನೀಡಿದ ದಾಖಲಾತಿಯೊಂದು ತಾಂತ್ರಿಕ ದೋಷದಿಂದ ಹಾಳಾಗಿತ್ತು. ಇಬ್ಬರು ಹೆಂಗಸರು ಹಾಗೂ ಒಬ್ಬ ಗಂಡಸು ಗಲಾಟೆ ಮಾಡಿ ದಾಖಲಾತಿಗಳನ್ನು ನೀಡಿ ಅಥವಾ ೧೦ ಸಾವಿರ ರೂ. ಹಣ ಕೊಡುವಂತೆ ಬೇಡಿಕೆಯಿಟ್ಟರು. ಅವರನ್ನು ಸಮಾಧಾನಪಡಿಸಲು ಮುಂದಾದಾಗ ವಿಡಿಯೋ ಮಾಡಲು ಯತ್ನಿಸಿ ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಮತ್ತೋರ್ವ ಆರೋಪಿ ಜೀವಬೆದರಿಕೆ ಒಡ್ಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ -ತಿಮತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್, ನೌಶಾದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಪುತ್ತೂರು ಚಿಕ್ಕಮುಡ್ನೂರು ನಿವಾಸಿ ಮಹಮ್ಮದ್ ನೌಶಾದ್ (೩೦) ವಿರುದ್ಧ ೨೦೨೪ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರನೇ ಪ್ರಕರಣ: ಜನಸೇವಾ ಕೇಂದ್ರದ ಎದುರು ಸಾರ್ವಜನಿಕರು ಗುಂಪುಗೂಡಿ ಗಲಾಟೆ ನಡೆಸುತ್ತಿರುವ ಮಾಹಿತಿಯಂತೆ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದು, ಜನರನ್ನು ಚದುರಿಸುತ್ತಿದ್ದಾಗ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಗಲಾಟೆಗೆ ಸಂಬಂಽಸಿದಂತೆ ಕೆಲವರನ್ನು ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾಗ ನಿಯಾಝ್, ನೌಶಾದ್ ಹಾಗೂ ಇತರರು ತಡೆಯೊಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ಪ್ರಕರಣ ದಾಖಲಾಗಿದೆ.