ಪುತ್ತೂರು: ಬಿಜೆಪಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕಾರ್ಯ ಮಾಡುತ್ತದೆ. ಜನರ ಉಪಯೋಗಕ್ಕೆ ಬಳಕೆಯಾಗಬೇಕಾದ ತೆರಿಗೆ ಹಣ ದುರುಪಯೋಗವಾಗಿದೆ. ಅಂಗವಿಕಲರು, ವೃದ್ಧರು, ವಿಧವೆಯರ ಪಿಂಚಣಿಯನ್ನು ಕಸಿಯಲಾಗಿದೆ. ಸ್ವಚ್ಛತಾ ಕಾರ್ಮಿಕರಿಗೆ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಗರ ಮಂಡಲ ವತಿಯಿಂದ ನಡೆದ ಜನಾಂದೋಲನ, ‘ನಮ್ಮ ಹಕ್ಕು ನಮಗೆ ನೀಡಿ’ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು.
ಎಸ್ಐಆರ್ ಮೂಲಕ ಭಯೋತ್ಪಾದನೆ ನಿಗ್ರಹಿಸಲಾಗಿದ್ದು, ಅರ್ಹ ಮತದಾರರರಿಗೆ ಎಲ್ಲೂ ಸಮಸ್ಯೆಯಾಗಿಲ್ಲ. ಪ್ರತಿಯೊಂದು ಹೆಜ್ಜೆ ಅಸಹಾಯಕರಿಗೆ ಶಕ್ತಿ ನೀಡುವ ಹೆಜ್ಜೆಯಾಗಿದೆ. ಮೋದಿ ವಿರುದ್ಧ ಮಾತನಾಡುವವರಿಗೆ ಸರಿಯಾಗಿ ಉತ್ತರ ನೀಡಬೇಕು ಎಂದರು.
ಬೊಳುವಾರು ವೃತ್ತದಿಂದ ಅಮರ್ ಜವಾನ್ ಜ್ಯೋತಿಯವರೆಗೆ ಪಾದಯಾತ್ರೆ ನಡೆಯಿತು. ಸಭೆಯ ಬಳಿಕ ನಗರಸಭೆ ಪೌರಾಯುಕ್ತೆ ವಿದ್ಯಾ ಕಾಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಮುಖರಾದ ಬುಡಿಯಾರ್ ರಾಧಾಕೃಷ್ಣ ರೈ, ಪ್ರಸನ್ನ ಮಾರ್ತ, ಜೀವಂಧರ್ ಜೈನ್, ಆರ್.ಸಿ.ನಾರಾಯಣ, ವಿದ್ಯಾ ಗೌರಿ, ಲೀಲಾವತಿ ಅಣ್ಣು ನಾಯ್ಕ, ಲೋಕೇಶ್ ಚಾಕೊಟೆ, ಶಶಿಧರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಶಿವಕುಮಾರ್ ಸ್ವಾಗತಿಸಿದರು. ದಯಾನಂದ ಉಜಿರೆಮಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವರಾಜ್ ಪೆರಿಯತ್ತೋಡಿ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೊಪಿಸಿದರು.