ಅಶೋಕ್ ಕುಮಾರ್ ರೈ 
ದಕ್ಷಿಣ ಕನ್ನಡ

ಅಭಿವೃದ್ಧಿಗೆ ೨೨೫೯.೬೫ ಕೋಟಿ ರೂ. ಅನುದಾನ MLA Pressmeet

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಮಾಹಿತಿ
ಪುತ್ತೂರು: ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಒಟ್ಟು ೨೨೫೯.೬೫ ಕೋಟಿ ರೂ. ಅನುದಾನ ತರಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ೨೫೧.೦೬ ಕೋಟಿ ರೂ. ಅನುದಾನ ಲಭಿಸಿದೆ. ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ೪೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ೪೫೦ ಕೋಟಿ ರೂ. ಅಂದಾಜುಪಟ್ಟಿ ಸಿದ್ದಪಡಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
೨೦೨೩-೨೪ನೇ ಸಾಲಿನಲ್ಲಿ ೧೪೭೯.೫೯ ಕೋಟಿ ರೂ., ೨೦೨೪-೨೫ನೇ ಸಾಲಿನಲ್ಲಿ ೫೨೯ ಕೋಟಿ ರೂ. ಅನುದಾನ ತರಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಅಭಿವೃದ್ಧಿಗೆ ಪ್ರತಿ ಕಿ.ಮೀ.ಗೆ ೧ ಕೋಟಿ ರೂ.ನಂತೆ ೩೮ ಕೋಟಿ ರೂ. ಅಂದಾಜು ಪಟ್ಟಿ  ಸಲ್ಲಿಸಲಾಗಿದೆ. ವಿಟ್ಲ ಕಬಕ ರಸ್ತೆಗೆ ಈಗಾಗಲೇ ೧೦ ಕೋಟಿ ರೂ. ಬಿಡುಗಡೆ ಹಂತದಲ್ಲಿದ್ದು, ಇನ್ನು ೧೫ ಕೋಟಿ ರೂ. ನೀಡುವ ಮೂಲಕ ಸುಮಾರು ೭.೫ ಕಿ.ಮೀ ಚತುಷ್ಪಥವಾಗಿ ಪರಿವರ್ತಿಸಲಾಗುವುದು. ಹಾರಾಡಿ ಮೇಲ್ಸೇತುವೆಗೆ ೮ ಕೋಟಿ ರೂ. ಹಾಗೂ ೧೨ ಕೋಟಿ ರೂ.ನಲ್ಲಿ ಉಪ್ಪಿನಂಗಡಿ- ಪುತ್ತೂರು ಚತುಷ್ಪಥ ಪೂರ್ಣಗೊಳಿಸುವ ಕಾರ್ಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಮೂಲಕ ಕೊಳವೆಬಾವಿ, ಕಿಂಡಿ ಅಣೆಕಟ್ಟು, ತೋಡಿನ ಬದಿಯ ತಡೆಗೋಡೆಗಳ ನಿರ್ಮಾಣಕ್ಕೆ ಅನುದಾನ ತರಿಸಲಾಗಿದೆ. ಕೆರೆ ಅಭಿವೃದ್ಧಿ, ರಸ್ತೆಗಳ ತಡೆಗೋಡೆಗೆ ವಿಶೇಷ ಒತ್ತು ನೀಡಲಾಗಿದೆ. ಅಂಬೇಡ್ಕರ್‌ಭವನ ನಿರ್ಮಾಣಕ್ಕೆ ಅನುದಾನ ತರಲಾಗಿದ್ದು, ಜಾಗ ಕಡಿಮೆ ಇರುವಲ್ಲಿ ಹೊಸ ಜಾಗ ನೀಡಲಾಗುತ್ತಿದೆ. ೬೨೯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೇ.೧೩ರಷ್ಟು ಹಣ ಬಿಡುಗಡೆ ಮಾಡಲಾಗಿದೆ. ೫ ಮಂದಿ ಗುತ್ತಿಗೆದಾರರ ಮೂಲಕ ಕಾಮಗಾರಿಗಳು ನಡೆಯಲಿದೆ ಎಂದರು. 
ಕುರಿಯ ಗ್ರಾಮದಲ್ಲಿ ೭ಎಕರೆ ಜಾಗದಲ್ಲಿ ಕಾರ್ಮಿಕರ ವಸತಿಶಾಲೆ ನಿರ್ಮಾಣವಾಗಲಿದೆ. ಸಹಾಯಕ ಗುಪ್ತಚರ ಬ್ಯೂರೋ ಕಚೇರಿ ಹಾಗೂ ವಸತಿ ಸಂಕೀರ್ಣಕ್ಕೆ ಪಡ್ನೂರು ಗ್ರಾಮದಲ್ಲಿ ೦.೪೪ ಎಕರೆ ಜಾಗ ನೀಡಲಾಗಿದೆ. ಮಹಿಳಾ ಠಾಣೆಗೆ ೨೫ರಿಂದ ೩೦ ಸೆಂಟ್ಸ್ ಜಾಗದ ಅಗತ್ಯತೆ ಇದ್ದು, ಕೊಂಬೆಟ್ಟು ಭಾಗದಲ್ಲಿ ಜಾಗ ನೀಡಲಾಗುತ್ತಿದೆ. ಈಗಾಗಲೇ ನೀಡಲಾದ ೯ ಸೆಂಟ್ಸ್ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುವುದು ಎಂದರು.

ಇತಿಹಾಸದಲ್ಲಿ ಮೊದಲ ಬಾರಿ

ಹಿಂದೂ ದೇವಾಲಯಗಳ ಅಭಿವೃದ್ಧಿಗೆ ೮ ಕೋಟಿ ರೂ. ಅನುದಾನ, ಜೈನ ಸಮುದಾಯದ ಉಪ್ಪಿನಂಗಡಿ ಹಾಗೂ ಬಜತ್ತೂರು ಬಸದಿಗಳ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂ. ನೀಡಲಾಗಿದೆ. ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸುಮಾರು ೯ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಇದು ಇತಿಹಾಸದಲ್ಲಿ ಮೊದಲ ಬಾರಿ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.

ಉಪ್ಪಿನಗಂಡಿ ಪುತ್ತೂರಿನಲ್ಲೇ ಇರಲಿದೆ!

ಬೆಳ್ತಗಂಡಿಯಲ್ಲಿ ನೂತನವಾಗಿ ಪೊಲೀಸ್ ಉಪನಿರೀಕ್ಷಕರ ಕಚೇರಿಯಾಗಿದ್ದು, ಉಪ್ಪಿನಂಗಡಿಯನ್ನು ಅಲ್ಲಿಗೆ ಸೇರಿಸುವ ಪ್ರಯತ್ನಕ್ಕೆ ನಮ್ಮದೂ ವಿರೋಧವಿದೆ. ಪುತ್ತೂರು ವ್ಯಾಪ್ತಿಯಲ್ಲೇ ಉಳಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಈಗಾಗಲೇ ಪತ್ರ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.