ಪುತ್ತೂರು ಭಾಗದಲ್ಲಿ ಹಾರಾಟ ನಡೆಸಿದ ಲಘು ವಿಮಾನ. 
ದಕ್ಷಿಣ ಕನ್ನಡ

ಪುತ್ತೂರಲ್ಲಿ ಲಘು ವಿಮಾನ ಹಾರಾಟ Airline

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಭೂಗರ್ಭಶಾಸ ಸಮೀಕ್ಷೆಗಾಗಿ ಮಾಹಿತಿ ಸಂಗ್ರಹ
ಪುತ್ತೂರು: ನಗರ ಭಾಗದಲ್ಲಿ ಲಘು ವಿಮಾನವೊಂದು ಮಂಗಳವಾರ ಭೂಮಿಗೆ ತಳಮಟ್ಟದಲ್ಲಿ ಹಾರಾಟ ನಡೆಸುವ ಮೂಲಕ ಜನರಲ್ಲಿ ಆತಂಕ ಮೂಡಿಸಿತು. ಸುಮಾರು ೩-೪ ಸುತ್ತು ಹಾರಾಟ ನಡೆಸಿರುವುದನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ವಿಮಾನ ಭಾರತೀಯ ಭೂಗರ್ಭ ಶಾಸ್ತ್ರ ಸರ್ವೇಗೆ ಸಂಬಂಧಿಸಿದ ಸಮೀಕ್ಷಾ ವಿಮಾನವಾಗಿದ್ದು, ಭೂಮಿ ಅಡಿಯಲ್ಲಿರುವ ಖನಿಜ ಸಂಪತ್ತು, ಭೂಗತ ಜಲಮೂಲಗಳು ಮತ್ತು ಭೂಸಂರಚನೆಯನ್ನು ಮ್ಯಾಪಿಂಗ್ ಮಾಡಲು ಸಮೀಕ್ಷೆ ನಡೆಸಲಾಗುತ್ತದೆ. ವಿಮಾನದಲ್ಲಿ ಅಳವಡಿಸಲಾದ ತಂತ್ರಜ್ಞಾನದ ಮೂಲಕ ನಿಖರ ಮಾಹಿತಿ ಪಡೆದುಕೊಳ್ಳಲು ಸಾವಿರದಿಂದ ೧,೫೦೦ ಅಡಿ ಎತ್ತರದಲ್ಲಿ ಹಾರಾಟ ನಡೆಸಬೇಕಾಗುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.