3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಚಪ್ಪರ ಮುಹೂರ್ತ ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕ ವಿ.ಎಸ್.ಭಟ್ ನೇತರತ್ವದಲ್ಲಿ ನಡೆಯಿತು. 
ದಕ್ಷಿಣ ಕನ್ನಡ

ಯಶಸ್ವಿ ಕಾರ್ಯಕ್ರಮಕ್ಕೆ ಪೂರಕ ವಾತಾವರಣ Puttila

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಅರುಣ್ ಕುಮಾರ್ ಪುತ್ತಿಲ ಅಭಿಮತ
  • 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ

ಪುತ್ತೂರು:ಕಲ್ಯೋಣೋತ್ಸವದ ಅಂಗವಾಗಿ ಎರಡು ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಪೂರಕ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. 400ಅಡಿ ಉದ್ದ ಹಾಗೂ 140 ಅಡಿ ಅಗಲದ ಪೆಂಡಾಲ್ ಹಾಕಿ, 140 ಅಡಿ ಅಗಲ, 60 ಅಡಿ ಉದ್ದದವೇದಿಕೆ ನಿರ್ಮಾಣ, 15 ಸಾವಿರ ಆಸನದವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ದೇವಮಾರುಗದ್ದೆಯಲ್ಲಿ ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಾರಥ್ಯದಲ್ಲಿ ನ.29, 30ರಂದು 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಚಪ್ಪರ ಮುಹೂರ್ತ ಸಂದರ್ಭ ಮಾತನಾಡಿದರು.

ಮಹಾಲಿಂಗೇಶ್ವರದೇವಸ್ಥಾನ ಅರ್ಚಕ ವಿ. ಎಸ್. ಭಟ್ ಧಾರ್ಮಿಕ ಕಾರ್ಯಕ್ರಮ ನಡೆಸಿದರು. ಶಾಮಿಯಾನ ಮ್ಝಾಐಕ ರಾಮಕೃಷ್ಣ ಭಟ್‌ಗೆವೀಳ್ಯ ನೀಡಲಾಯಿತು.

ಗುರುತಂತ್ರಿ, ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಬಿಜೆಪಿ ಪ್ರಮುಖ ಪ್ರಸನ್ನ ಮಾರ್ತ, ವಕೀಲ ಚಿನ್ಮಯ, ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಸಿದ್ಧನಾಥ ಎಸ್. ಕೆ., ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ರಾಮ ಭಟ್ ಪಾತಾಳ, ಕಲ್ಯಾಣೋತ್ಸವ ಅಧ್ಯಕ್ಷ ನರಸಿಂಹ ಪ್ರಸಾದ್, ಕೋಶಾಧಿಕಾರಿ ಗಣೇಶ್ ಮಕರಂದ, ಸಹ ಸಂಚಾಲಕ ಉಮೇಶ್ಕೋಡಿಬೈಲು, ರವಿ ಕುಮಾರ್ ರೈ ಕೆದಂಬಾಡಿ ಮಠ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜತೆ ಕಾರ್ಯದರ್ಶಿ ರಾಜು ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಸಂಚಾಲಕ ಅನಿಲ್ ತೆಂಕಿಲ, ಕಾರ್ಯದರ್ಶಿ ಪ್ರೇಮ್‌ರಾಜ್ ಮತ್ತಿತರರುಉಪಸ್ಥಿತರಿದ್ದರು.

"

೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು, ಈ ಸಂದರ್ಭ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ. ಮಹಾಜನರ ಒಗ್ಗೂಡುವಿಕೆಯಿಂದ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಬೇಕಾಗಿದೆ.

"

ತಿರುಪತಿ ವೆಂಕಟ್ರಮಣ ಎಂದರೆ ಕಲಿಯುಗದ ವಿಷ್ಣು ಎಂಬ ನಂಬಿಕೆ ಎಲ್ಲರಲ್ಲಿದೆ. ತಿರುಪತಿಯ ವೆಂಕಟ್ರಮಣನ ಪ್ರತಿರೂಪ ಪುತ್ತೂರಿಗೆ ಆಗಮಿಸಿ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ. ಸಾಮೂಹಿಕ ವಿವಾಹ ನಡೆಯುತ್ತಿರುವುದು ಪುಣ ಕಾರ್ಯ.