ಎನ್‌ಜಿಒ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. 
ದಕ್ಷಿಣ ಕನ್ನಡ

ಎಸ್‌ಐಆರ್ ಪ್ರಕ್ರಿಯೆ ತಕ್ಷಣ ನಿಲ್ಲಿಸಲಿ : ಎ.ಟಿ.ಶಶಿ ಆಗ್ರಹ

ಕಾಸರಗೋಡು: ಪಯ್ಯನ್ನೂರು ವಿಧಾನಸಭಾ ಕ್ಷೇತ್ರದ ಬೂತ್‌ಮಟ್ಟದ ಅಧಿಕಾರಿ(ಬಿಎಲ್‌ಒ) ಅನೀಶ್ ಜಾರ್ಜ್ ಎಂಬುವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕೇರಳ ಎನ್‌ಜಿಒ ಅಸೋಸಿಯೇಷನ್ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಪ್ರತಿಭಟನೆ ನಡೆಯಿತು.

ಕೇರಳ ಎನ್‌ಜಿಒ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎ.ಟಿ.ಶಶಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಇದರಿಂದ ಆತ್ಮಹತ್ಯೆಗೆ ಮುಂದಾಗುವಂತಾಗಿದೆ. ಆತ್ಮಹತ್ಯಾ ಪ್ರಕರಣ ಮರುಕಳಿಸದಿರುವಂತಾಗಲು ಎಸ್‌ಐಆರ್ ಪ್ರಕ್ರಿಯೆ ತಕ್ಷಣ ನಿಲ್ಲಿಸಬೇಕು ಎಂದರು.

ಸಂಘಟನೆ ರಾಜ್ಯ ಸಮಿತಿ ಸದಸ್ಯ ವಿಟಿಪಿ ರಾಜೇಶ್, ರಾಜ್ಯ ಕಾರ್ಯಕಾರಿ ಸದಸ್ಯ ಸುರೇಶ್ ಪೆರಿಯಂಗನಂ, ರಾಜ್ಯ ಸಮಿತಿ ಸದಸ್ಯೆ ಎಂ.ಟಿ.ಪ್ರಸೀದಾ, ಕೆ.ಜಿ.ರಾಧಾಕೃಷ್ಣನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಕುಂಞಿಕೃಷ್ಣನ್, ಜಿಲ್ಲಾ ಖಜಾಂಚಿ ವಿ.ಎಂ.ರಾಜೇಶ್, ಕೆ.ಮುರಳೀಧರನ್ ನಾಯರ್, ಶರೀನಿಮೋನ್ ಕಾಞಂಗಾಡ್, ಬಾಬುರಾಜನ್ ತೈಕಡಪ್ಪುರ, ಜಯರಾಜ್ ಪೆರಿಯ, ರತೀಶ್ ಬಂದಡ್ಕ, ರತಿ ವಯಲಾಪ್ರಂ, ಗಿರಿಜಾ ಮಪ್ಪಿಡಿಚ್ಚೇರಿ ಇದ್ದರು.