ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಬೆಟ್ಟಂಪಾಡಿ ಗ್ರಾಪಂ ಎದುರು ಪ್ರತಿಭಟನೆ ನಡೆಯಿತು. 
ದಕ್ಷಿಣ ಕನ್ನಡ

ಕೇಂದ್ರದ ಜನವಿರೋಧಿ ಕ್ರಮ ವಿರೋಧಿಸಿ ಪ್ರತಿಭಟನೆ

ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಗ್ರಾಪಂಗಳ ಧ್ವನಿಯಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ 15ನೇ ಹಣಕಾಸು ಯೋಜನೆ ಅನುದಾನ ಪಂಚಾಯಿತಿಗಳಿಗೆ ಬಿಡುಗಡೆ ಮಾಡದಿರುವುದರಿಂದ ಪಂಚಾಯಿತಿಗಳಲ್ಲಿ ತಯಾರಿಸಿದ ಕ್ರಿಯಾ ಯೋಜನೆಯ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲದಂತಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಾವಣೆ ಜತೆಗೆ ಯೋಜನೆಯನ್ನು ಶಾಶ್ವತವಾಗಿ ನಿಲ್ಲಿಸುವ ಹುನ್ನಾರ ಮೋದಿ ಸರ್ಕಾರದಿಂದ ನಡೆಯುತ್ತಿದೆ ಎಂದರು.
ಪುತ್ತೂರು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪುತ್ತೂರು ರೈತಧ್ವನಿ ಸಂಘಟನೆ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮತ್ತು ಬೆಟ್ಟಂಪಾಡಿ ಪಂಚಾಯಿತಿ ಸದಸ್ಯ ನವೀನ್ ರೈ ಚೆಲ್ಯಡ್ಕ ಮಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ರೂಪೇಶ್ ಶೆಟ್ಟಿ ಅಲಿಮಾರ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ, ಕೆ.ಪಿ.ಭಟ್ ಕೋನಡ್ಕ, ಬಾಬು ರೈ ಕೋಟೆ, ನೂರುದ್ದಿನ್ ಸಾಲ್ಮರ, ರವಿಪ್ರಸಾದ ಶೆಟ್ಟಿ ಬನ್ನೂರು, ಮಹಾಲಿಂಗ ನಾಯ್ಕ, ಮೊಯ್ದುಕುಂಞಿ, ಲಲಿತಾ ಚಿದಾನಂದ, ಐತ್ತಪ್ಪ, ಅಬೂಬಕ್ಕರ್ ಕೊರಿಂಗಿಲ ಮತ್ತಿತರರು ಇದ್ದರು.