ದಕ್ಷಿಣ ಕನ್ನಡ

ಮಂಗಳೂರು ಮನೆಯಿಂದ 8 ಲಕ್ಷ ರೂ. ಮೌಲ್ಯದ ಸೊತ್ತು ಕಳವು

ಮಂಗಳೂರು: ಪದವು ಗ್ರಾಮದ ಕುಲಶೇಖರ ಸಿಲ್ವರ್ ಗೇಟ್ ಬಳಿಯ ಅಂಚನ್ ಕುಟುಂಬಸ್ಥರ ಗುತ್ತಿನ ಪೂಜೆ ಮಾಡುವ ಮನೆಯಿಂದ ಸುಮಾರು 8 ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.21ರಂದು ಮಧ್ಯಾಹ್ನ 2 ಗಂಟೆಯಿಂದ ಅ.22ರಂದು ಬೆಳಗ್ಗೆ 7 ಗಂಟೆಯ ನಡುವೆ ಕಳ್ಳತನ ನಡೆದಿದೆ. ಗುರುವಾರ ಬೆಳಗ್ಗೆ 7 ಗಂಟೆ ವೇಳೆಗೆ ಹೋದಾಗ ಘಟನೆ ಕಳವು ನಡೆದಿರುವುದು ಬಂದಿದೆ. ಮನೆಯ ಮುಖ್ಯಸ್ಥರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳ್ಳರು 2 ಪವನ್ ಚಿನ್ನದ ಸರ, 1 ಚಿನ್ನದ ಬಳೆ , 1ಸಣ್ಣ ಕರಿಮಣಿ,1 ಚಿನ್ನದ ಉಂಗುರ, 7 ಚಿನ್ನದ ಮೂಗುತ್ತಿ, 2 ಕೆ.ಜಿ 500 ಗ್ರಾಂ. ನ ಬೆಳ್ಳಿಯ ಗಟ್ಟಿ, 2 ಬೆಳ್ಳಿಯ ತಟ್ಟೆ, 2 ಬೆಳ್ಳಿಯ ಲೋಟ, 1 ಬೆಳ್ಳಿಯ ಗಿಂಡಿ, 1. ಬೆಳ್ಳಿಯ ಸೊಂಟದ ಪಟ್ಟಿ, 4 ಬೆಳ್ಳಿಯ ಬಳೆ, 4 ದೈವದ ಅಣಿಯ ಬೆಳ್ಳಿಯ ಸೆಟ್ , ಕಾಣಿಕೆ ಡಬ್ಬಿ, 2 ಚಿನ್ನದ ಅರ್ಧ ಪವನ್ ನ ನಾಣ್ಯ ಸೇರಿ ಸುಮಾರು 8 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.