ಬಂಟ್ವಾಳದ ಬಿ.ಸಿ.ರೋಡಿನಿಂದ ಕೈಕುಂಜೆಅಲೆತ್ತೂರು ಮೂಲಕ ಗ್ರಾಮ ದೈವ ಪಂಜುರ್ಲಿ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶಾಸಕ ರಾಜೇಶ್ ನಾಯ್ಕ ಉಪಸ್ಥಿತಿಯಲ್ಲಿ ನಿವೃತ್ತ ಶಿಕ್ಷಕ ವಾಸು ವಾಸ್ಟರ್ ಉದ್ಘಾಟಿಸಿದರು. ಗೋವಿಂದ ಪ್ರಭು, ಶಿವರಾಜ್ ಕೈಕುಂಜೆ ಮತ್ತಿತರರು ಇದ್ದರು. 
ದಕ್ಷಿಣ ಕನ್ನಡ

ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕೆ ಆದ್ಯತೆ

ಕೈಕುಂಜೆ-ಅಲೆತ್ತೂರು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಬಂಟ್ವಾಳ: ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಸ್ತೆ ಸಂಪರ್ಕ ಪ್ರಮುಖವಾಗಿದ್ದು, ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಹೇಳಿದರು.

ಬಂಟ್ವಾಳದ ಬಿ.ಸಿ.ರೋಡಿನಿಂದ ಕೈಕುಂಜೆ-ಅಲೆತ್ತೂರು ಮೂಲಕ ಗ್ರಾಮ ದೈವ ಪಂಜುರ್ಲಿ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ 20 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ 30 ಲಕ್ಷ ರೂ. ವೆಚ್ಚದಲ್ಲಿ ನಿರ್ವಾಣಗೊಂಡ ಕಿರು ಸೇತುವೆ ಉದ್ಘಾಟಿಸಿ ವಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ದೈನಂದಿನ ಸಂಚಾರ ಸುಗಮವಾಗುವುದರ ಜತೆಗೆ ಸ್ಥಳೀಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಜನರ ಅಗತ್ಯ ಗಮನದಲ್ಲಿಟ್ಟುಕೊಂಡು ರಸ್ತೆ, ಸೇತುವೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಿ ಕೈಗೆತ್ತಿಕೊಳ್ಳುವ ಇಂತಹ ಕಾಮಗಾರಿಗಳು ಗ್ರಾಮೀಣ ಭಾಗದ ಜನರಿಗೆ ದೀರ್ಕಾಲದ ಪ್ರಯೋಜನ ಒದಗಿಸಲಿವೆ ಎಂದು ಹೇಳಿದರು.

ಬಂಟ್ವಾಳ ಪುರಸಭೆಯ ನಿಕಟಪೂರ್ವ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಬೂತ್ ಅಧ್ಯಕ್ಷ ಶಿವರಾಜ್ ಕೈಕುಂಜೆ, ನಿತಿನ್ ಅಲೆತ್ತೂರು, ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುರೇಶ್ ಟೈಲರ್ ಕೈಕಂಬ, ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಶೆಟ್ಟಿ ಕೈಕಂಬ, ಮಂಗಳ ಫ್ರೆಂಡ್ಸ್ ಅಲೆತ್ತೂರು ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಅಶ್ವಥ್ ಶೆಟ್ಟಿ ಅಲೆತ್ತೂರು, ವಿಜಯ್ ಅಲೆತ್ತೂರು, ಪ್ರಣಾಮ್ ರಾಜ್ ಹಾಗೂ ಮಹೇಶ್ ಜುವಾದಿಗುಡ್ಡೆ ಉಪಸ್ಥಿತರಿದ್ದರು.