ಡಾ.ಪ್ರಭಾಕರ ಭಟ್ ಕಲ್ಲಡ್ಕ 
ದಕ್ಷಿಣ ಕನ್ನಡ

ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಭಾಕರ ಭಟ್

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಿಂದ ನೋಟಿಸ್‌

ಬಂಟ್ವಾಳ (ದ.ಕ.): ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಿಂದ ನೀಡಲಾಗಿರುವ ನೋಟಿಸ್‌ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿ ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ಸೆ.23ರಂದು ಪೊಲೀಸ್ ನೋಟಿಸ್ ತಲುಪಿದ್ದು, ನೋಟಿಸ್‌ನಲ್ಲಿ ತಿಳಿಸಿರುವ ದಿನ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಆದರೆ ಆ ದಿನ ಪೂರ್ವನಿಗದಿತ ಕಾರ್ಯಕ್ರಮಗಳು ಇರುವುದರಿಂದ ವಿಚಾರಣೆಗೆ ಹಾಜರಾಗಲು ಅನುಕೂಲವಾಗುತ್ತಿಲ್ಲ.

ಆದ್ದರಿಂದ ಸಾಕಷ್ಟು ಕಾಲಾವಕಾಶ ನೀಡಿ ಬೇರೆ ದಿನ ನಿಗದಿಪಡಿಸಬೇಕು ಎಂದು ಅವರ ವಕೀಲರು ಠಾಣೆಯ ಸಹಾಯಕ ತನಿಖಾಧಿಕಾರಿ ಕಲೈಮಾರ್ ಪಿ.ಅವರಿಗೆ ಮನವಿ ಸಲ್ಲಿಸಿದ್ದಾರೆ.