ಪವರ್ ಫ್ರೆಂಡ್ಸ್ ಬೆದ್ರ-ಶಾಮಿಯಾನ ಮಾಲಕರ ಸಂಘದಿಂದ ಕನ್ನಡ ಭವನದಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮಾತನಾಡಿದರು. 
ದಕ್ಷಿಣ ಕನ್ನಡ

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ : ಸುದರ್ಶನ್ ಬಣ್ಣನೆ 651 ಮಂದಿಗೆ ಆಧಾರ್, 245 ಮಂದಿಗೆ ವಿಮೆ ನೋಂದಣಿ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಕೇಂದ್ರ ಸರ್ಕಾರದ ಮುತುವರ್ಜಿಯಿಂದ ಅಂಚೆ ಕಚೇರಿಗಳು ಹಿಂದಿನಂತೆಯೇ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಆರೋಗ್ಯ ಮತ್ತು ಇನ್ನಿತರ ಸೌಲಭ್ಯಗಳು ಅಂಚೆ ಇಲಾಖೆ ಮೂಲಕ ಬಡವರ್ಗವನ್ನು ತಲುಪುತ್ತಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಹೇಳಿದರು.

ಪವರ್ ಫ್ರೆಂಡ್ಸ್ ಬೆದ್ರ, ದ.ಕ. ಜಿಲ್ಲಾ ಶಾಮಿಯಾನ ಮಾಲೀಕರ ಸಂಘ ಮತ್ತು ಭಾರತೀಯ ಅಂಚೆ ಇಲಾಖೆ (ಪುತ್ತೂರು ವಿಭಾಗ) ಸಹಯೋಗದಲ್ಲಿ ಭಾನುವಾರ ಕನ್ನಡ ಭವನದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಮತ್ತು ಆಧಾರ್ ನೋಂದಣಿ, ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯಮಿ ಶ್ರೀಪತಿ ಭಟ್ ಉದ್ಘಾಟಿಸಿದರು. ಶಾಮಿಯಾನ ಸಂಘ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್, ವಕೀಲ ಶರತ್ ಶೆಟ್ಟಿ, ಉದ್ಯಮಿ ಅಬುಲಾಲ್ ಪುತ್ತಿಗೆ, ಪುತ್ತೂರು ಅಂಚೆ ಇಲಾಖೆ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್, ಸಿಸ್ಟಮ್ ಅಡ್ಮಿನ್ ನೂತನ್ ಬಂಗೇರ ಉಪಸ್ಥಿತರಿದ್ದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸುಮಾರು 651 ಮಂದಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೌಲಭ್ಯ ಪಡೆದುಕೊಂಡರು. 245 ಮಂದಿ ಅಪಘಾತ ಮತ್ತು ಆರೋಗ್ಯ ವಿಮೆಗಾಗಿ ನೋಂದಣಿ ಮಾಡಿಸಿಕೊಂಡರು.